baloon 
ಜಿಲ್ಲೆ

ಪರಿಸರ ಮಾರಕ ಬಲೂನುಗಳ ಬಳಕೆಗೆ ವಿರೋಧ

ಶಿವರಾಜ.ಎಂ

ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ನಿಷೇಧಕ್ಕೆ ಆಗ್ರಹ

ಕೆಎಸ್‌ಪಿಸಿಬಿಯಿಂದ ಎಚ್ಚರಿಕೆ


ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಸ್ವಾತಂತ್ರ್ಯ ದಿನದ ಆಚರಣೆಗೆ ಎಲ್ಲೆಡೆ ಭರದ ಸಿದ್ದತೆ ನಡೆಯುತ್ತಿದೆ, ಸ್ವಾತಂತ್ರ್ಯ ಸಂಭ್ರಮದಲ್ಲಿ ಎಲ್ಲಿಯೂ ಪ್ಲಾಸ್ಟಿಕ್ ಬಾವುಟ ಸೇರಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸದಂತೆ ಜಿಲ್ಲಾಡಳಿತಗಳು ಎಚ್ಚರಿಕೆ ನೀಡಿವೆ. ಏನತ್ಮಧ್ಯೆ ಪರಿಸರ ಹಾಗೂ ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿರುವ ಬಲೂನ್‌ಗಳ ಬಳಕೆ ಬಗ್ಗೆ ಪರಿಸರ ತಜ್ಞರು, ಪಕ್ಷಿ, ಪ್ರಾಣಿ ಪ್ರಿಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಭಾರತ ಸರ್ಕಾರವೂ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಪ್ಲಾಸ್ಟಿಕ್ ಧ್ವಜಗಳ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಆದರೆ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್‌ನ ರೂಪವೇ ಆಗಿರುವ ಬಲೂನುಗಳ ಬಳಕೆ ನಿಷೇಧದ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ಆಕ್ಷೇಪ ಕೇಳಿಬರುತ್ತಿದೆ.
ಅಪಾಯಕಾರಿ ಅನಿಲ: ರಾಷ್ಟ್ರೀಯ ಗೌರವ ಕಾಯ್ದೆ ಮತ್ತು ಭಾರತದ ಧ್ವಜ ಸಂಹಿತೆ ನಿಯಮದಡಿ ಎಲ್ಲ ಸರ್ಕಾರಿ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕರು ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾಕೂಟಗಳ ಸಂದರ್ಭಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ರಾಷ್ಟ್ರೀಯ ಧ್ವಜಗಳನ್ನು ಬಳಸುವಂತಿಲ್ಲ ಎಂದು ಆದೇಶಿಸಿದೆ ಆದರೆ ಇದರಷ್ಟೇ ಅಪಾಯಕಾರಿಯಾದ ಹಿಲಿಯಂ, ಹೈಡ್ರೋಜನ್ ಅನಿಲ ಬಳಿಸಿದ ಬಲೂನುಗಳ ಬಳಕೆ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಇದೊಂದು ಪಾಶ್ಚಾತ್ಯ ಸಂಸ್ಕೃತಿಯಾಗಿದ್ದು, ಪರಿಸರಕ್ಕೆ ಮಾರಕವಾಗಿರುವ ಈ ಸಂಸ್ಕೃತಿಯನ್ನು ನಿಷೇಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ವಿದ್ಯುತ್ ಅವಘಡಕ್ಕೆ ದಾರಿ: ಹಿಲಿಯಂ ಅನಿಲ ತುಂಬಿಕೊಂಡ ಬಲೂನುಗಳು ವಿದ್ಯುತ್ ಸಂಪಕಕ್ಕೆ ಬಂದರೆ ಸ್ಪೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ ಎನ್ನಲಾಗಿದೆ. ಬಲೂನುಗಳನ್ನು ಹಾರಿಬಿಟ್ಟಾಗ ಅವು ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬರುವ ಅಪಾಯವಿರುತ್ತದೆ ಅಪಘಡಗಳಿಗೆ ದಾರಿ ಮಾಡಿಕೊಡುತ್ತವೆ ಎಂಬ ಆತಂಕವಿದೆ.
ಪಕ್ಷಿಗಳ ಪ್ರಾಣಕ್ಕೆ ಕುತ್ತು: ನೂರಾರು ಬಲೂನುಗಳ ಗುಚ್ಛವನ್ನು ಹಾರಿಬಿಟ್ಟ ಬಳಿಕ ಅವು ಸ್ಟೋಟಗೊಂಡ ಬಳಿಕ ದಮರಗಿಡ, ಕಟ್ಟಡ ಸೇರಿ ಎಲ್ಲೆಂದರಲ್ಲಿ ಬೀಳುತ್ತವೆ. ಅವುಗಳು ಪಕ್ಷಿಗಳ ಕಾಲಿಗೆ, ಕತ್ತಿಗೆ ಸುತ್ತಿಕೊಂಡು ಪಕ್ಷಿಗಳ ಪ್ರಾಣಕ್ಕೆ ಸಂಚಾಕಾರ ತರುತ್ತವೆ ಎಂಬುದು ಪಕ್ಷಿ ಪ್ರಿಯರ ಆತಂಕವಾಗಿದೆ.


ಬಲೂನ್‌ನಿಂದ ಮಕ್ಕಳಿಗೆ ಗಾಯ: ಬೆಂಗಳೂರಿನ ಕೆಆರ್‌ಪುರಂನಲ್ಲಿ ಹುಟ್ಟುಹಬ್ಬದ ಕಾರ್ಯಕ್ರಮವೊಂದರಲ್ಲಿ ಹೀಲಿಯಂ ಬಲೂನು ವಿದ್ಯುತ್ ತಂತಿಗೆ ತಗಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಾಲ್ವರು ಮಕ್ಕಳು ತೀವ್ರ ಗಾಯಗೊಂಡಿದ್ದರು. ಕೊಳತೂರಿನ ನಿವಾಸಿ ವಿಜಯ್ ಎಂಬುವರು ಮನೆಯಲ್ಲಿ ಮಗನ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಿದ್ದರು. ಈವೇಳೆ ಹೀಲಿಯಂ ತುಂಬಿದ್ದ ಬಲೂನುಗಳೊಂದಿಗೆ ಇನ್ನಿತರ ಮಕ್ಕಳು ಆಟವಾಡುವಾತ ಅವಘಡ ಸಂಭವಿಸಿತ್ತು.

ಬಲೂನ್ ವ್ಯಾಪಾರಿ ಸಾವು: ಕಳೆದ ವರ್ಷ ಬೆಂಗಳೂರಿನಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ ಬಲೂನ್ ಸ್ಪೋಟಗೊಂಡು ಮೃತಪಟ್ಟ ಪ್ರಕರಣ ನಡೆದಿತ್ತು. ರಸ್ತೆ ಬದಿಯಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಲೂನಿಗೆ ಗಾಳಿ ತುಂಬಿಸುವ ವೇಳೆ ಅವಘಡ ಸಂಭವಿಸಿತ್ತು.ಇದೊಂದು ಪರಿಸರಕ್ಕೆ ಮಾರಕವಾದ ಸಂಸ್ಕೃತಿ ಎನ್ನಬಹುದು, ಬಲೂನ್ ಹಾರಿ ಬಿಡಲು ಬಳಸುವ ಹಿಲಿಯಂ, ಹೈಡ್ರೋಜನ್ ಮತ್ತಿತರ ರಾಸಾಯನಿಕ ಪರಿಸರದಲ್ಲಿನ ಪ್ರಾಣವಾಯುವಿನೊಂದಿಗೆ ಬೆರೆತು ಮನುಷ್ಯನ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ಸರ್ಕಾರಿ ಕಾರ್ಯಕ್ರಮಗಳಲ್ಲದೆ ಖಾಸಗಿಯ ಕಾರ್ಯಕ್ರಮಗಳಲ್ಲೂ ಇಂಥಹದ್ದೊಂದು ವಿನಾಶಕ ಸಂಸ್ಕೃತಿ ಹೆಚ್ಚಿರುವುದು ಆತಂಕಕಾರಿ ವಿಷಯ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಯಲ್ಲಪ್ಪರೆಡ್ಡಿ, ಪರಿಸರ ತಜ್ಞ

ಬಲೂನು ಹಾಗೂ ಏಕ ಬಳಕೆ ಪ್ಲಾಸ್ಟಿಕ್ ಇವರೆಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಪ್ಲಾಸ್ಟಿಕ್‌ನಂತೆಯೇ ಇದೂ ಸಹ ಪರಿಸರಕ್ಕೆ ಮಾರಕವಾಗಿದೆ, ಭೂಮಿಯಲ್ಲಿ ಇದು ಕೊಳೆಯುವುದಿಲ್ಲ, ನೀರಿನಲ್ಲಿ ಸೇರಿದರೆ ಕೊಕ್ಕರೆ, ಮೀನು ಸೇರಿ ಜಲಚರಗಳ ಪ್ರಾಣಕ್ಕೆ ಕುತ್ತು ತರುತ್ತದೆ, ಯಾವುದೇ ಸರ್ಕಾರಿ ಹಾಗೂ ಇನ್ನಿತರ ಖಾಸಗಿ ಕಾರ್ಯಕ್ರಮಗಳಲ್ಲಿ ಬಲೂನುಗಳನ್ನು ಹಾರಿಬಿಡಬಾರದೆಂದು ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಬಳಕೆಯಿಂದ ಭೂಮಿ, ವಾಯು, ನೀರು ಸೇರಿ ಎಲ್ಲ ಬಗೆಯಲ್ಲೂ ತೊಂದರೆ ಎದುರಾಗಲಿದೆ.
ಬಾಲಚಂದ್ರ, ಎಸ್‌ಇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ