ಸಿರಿಗೇರಿ ಗ್ರಾಮದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, ರಂಗ ಸನ್ಮಾನ, ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕಲಾವಿದೆ ಮುಕ್ತಬಾಯಿ ಕುಮುಚಿ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಜೆ.ದಿವಾಕರ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ್ಣ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ, ಕಾರ್ಯದರ್ಶಿ ವೈ.ಮಂಜುನಾಥ ಇದ್ದರು. 
ಬಳ್ಳಾರಿ

ಯುವಕರು ರಂಗಭೂಮಿಗೆ ಆಸಕ್ತಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ರಂಗಭೂಮಿ
ಬಳ್ಳಾರಿ : ರಂಗಭೂಮಿಯು ತನ್ನದೇ ಅದ ಹಲವು ದಶಕಗಳ ಇತಿಹಾಸ ಹೊಂದಿದೆ ಎಂದು ರಂಗಭೂಮಿ ಕಲಾವಿದ ಜೆ.ದಿವಾಕರ್ ಹೇಳಿದರು.
ಗ್ರಾಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಧಾತ್ರಿ ರಂಗ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಸಂಸ್ಥೆಯ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ, ರಂಗ ಸನ್ಮಾನ, ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ಯುವ ಪೀಳಿಗೆಯು ಅತಿಯಾದ ಮೊಬೈಲ್ ಬಳಕೆ ಬಿಟ್ಟು ರಂಗಭೂಮಿ ಕಡೆ ಆಸಕ್ತಿವಹಿಸಬೇಕು. ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಭಿನಯ ಹಾಗೂ ಹಾಡುಗಾರಿಕೆ ಮೂಲಕ ಜನರಲ್ಲಿ ಅರಿವು ಮೂಡಿಸಬಹುದು ಎಂದು ಸಲಹೆ ನೀಡಿದರು. ಬಳಿಕ ಧಾತ್ರಿ ರಂಗ ಸಂಸ್ಥೆಯಿಂದ ಶ್ರೀಕೃಷ್ಣ ಸಂಧಾನ ಎಂಬ ಹಾಸ್ಯ ನಾಟಕ ಪ್ರದರ್ಶನಗೊಂಡಿತು.