ಕೊಟ್ಟೂರಿನಲ್ಲಿ ಆಯೋಜಿಸಿದ್ದ ಸಂಗೀತ ಹಾಗೂ ನಾಟಕೋತ್ಸವ ಸಮಾರಂಭದಲ್ಲಿ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶ, ಸರಿಗಮಪ ಕಲಾವಿದರನ್ನು ಗೌರವಿಸಲಾಯಿತು. ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್, ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ.ಸತ್ಯಪ್ರಕಾಶ್, ಪ್ರಮುಖರಾದ ಎಸ್.ಎಂ.ಮರುಳಸಿದ್ದಯ್ಯ, ಪಿ.ಎಂ.ಬಸವಲಿಂಗಯ್ಯ ಇತರರಿದ್ದರು.
- ಕೊಟ್ಟೂರು ಸಂಗೀತ ಹಾಗೂ ನಾಟಕೋತ್ಸವ
- ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಸಲಹೆ
ಕೊಟ್ಟೂರು: ಯುವ ಜನಾಂಗ ತಂತ್ರಜ್ಞಾನಕ್ಕಷ್ಟೇ ಮಾರುಹೋಗದೆ ಕಲೆ, ಸಂಸ್ಕೃತಿ, ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕೆಂದು ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಲಾ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಸಂಗೀತ ಹಾಗೂ ನಾಟಕೋತ್ಸವದ ನಾಲ್ಕನೇ ದಿನದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಕಲಾ ಕೇಂದ್ರದ ಕೊಡುಗೆ ಅಪಾರ ಎಂದರು.
ನಂದಿಪುರ ಅಭಿನವ ಚರಂತೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಕೋಗಳಿ ಕೊಟ್ರೇಶ್ ತಂಡದಿಂದ ಹಾಸ್ಯ, ಸರಿಗಮಪ ಕಲಾವಿದರಿಂದ ರಸಮಂಜರಿ, ಪುಟ್ಟರಾಜ್ ಗವಾಯಿ ಮೆಲೋಡಿಸ್ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ್ ಹಿರೇಮಠ್, ಗುರುದೇವ ವಿದ್ಯಾಸಂಸ್ಧೆ ಆಡಳಿತ ಮಂಡಳಿ ಸದಸ್ಯ ನಾಗರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಲಾ ಕೇಂದ್ರದ ಅಧ್ಯಕ್ಷ ಎಂ.ಎಂ.ಜೆ.ಸತ್ಯಪ್ರಕಾಶ್, ಕೊಟ್ಟೂರೇಶ್ವರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಿ.ಮೋಹನ್ ರೆಡ್ಡಿ, ಕಲಾ ಕೇಂದ್ರದ ಎಸ್.ಎಂ.ಗುರುಪ್ರಸಾದ್, ಎನ್.ಎಂ.ಜಲಜಾಕ್ಷಿ, ಪ್ರಮುಖರಾದ ಎಸ್.ಎಂ.ಮರುಳಸಿದ್ದಯ್ಯ, ಪಿ.ಎಂ.ಬಸವಲಿಂಗಯ್ಯ, ಅಡಿಕೆ ಮಂಜುನಾಥ್, ಎನ್.ಬಿ.ಕೊಟ್ರೇಶ್, ಕುಡತಿನಿಮೊಗ್ಗಿ ದೇವೇಂದ್ರಗೌಡ, ಅಂಚೆ ಕೊಟ್ರೇಶ್, ಮತ್ತಿಹಳ್ಳಿ ಪ್ರಕಾಶ್, ಕೆ.ಎಂ.ರಾಜು, ಗಜಾಪುರ ಸತೀಶ್, ಕೆ.ಅಯ್ಯನಹಳ್ಳಿ ನಾಗಪ್ಪ ತಿಪ್ಪಜ್ಜಿ ರಾಜಣ್ಣ, ವೀರೇಶ್, ಸೋಮಣ್ಣ ಇತರರಿದ್ದರು.