ಜಿ.ಕೋಡಿಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ, ಯೋಗ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ವೈದ್ಯೆ ಹಾಲಮ್ಮ ಮತ್ತಿತರರಿದ್ದರು. 
ಬಳ್ಳಾರಿ

ಆಧುನಿಕ ಯುಗದಲ್ಲಿ ಯೋಗ ಅನಿವಾರ್ಯ

ಪ್ರಮುಖ ಮುಖ್ಯಾಂಶಗಳು

  • ದಿನನಿತ್ಯ
  • ಬಿಡುವು
  • ಯೋಗಾಭ್ಯಾಸ
ಡಾ.ಮಹೇಶ್ವರ ಸ್ವಾಮೀಜಿ ಅನಿಸಿಕೆ ಸಮಾರೋಪ ಸಮಾರಂಭ
ಹಗರಿಬೊಮ್ಮನಹಳ್ಳಿ: ತಂಬ್ರಹಳ್ಳಿಯಲ್ಲಿ ಜಿ.ಕೋಡಿಹಳ್ಳಿ ಆಯುಷ್ಮಾನ್ ಇಲಾಖೆ ಮತ್ತು ತಂಬ್ರಹಳ್ಳಿ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ 10ದಿನಗಳ ಕಾಲ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು.
ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ ಮಾತನಾಡಿ, ಆರೋಗ್ಯ ದೃಷ್ಟಿಯಿಂದ ಯೋಗ ಎನ್ನುವುದು, ಹಿರಿಯರಿಗೂ ಮತ್ತು ಕಿರಿಯರಿಗೂ ಅನಿವಾರ್ಯವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಮಾತನಾಡಿ, ಇಂದಿನ ಆಹಾರ, ನೀರು, ಗಾಳಿ ಸೇರಿದಂತೆ ಕಲುಷಿತ ವಾತಾವರಣದಲ್ಲಿ ಕೆಲ ಗಂಟೆಗಳ ಕಾಲ ಯೋಗವನ್ನು ಮೈಗೂಡಿಸಿಕೊಂಡಲ್ಲಿ ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ವೈದ್ಯೆ ಹಾಲಮ್ಮ ಮಾತನಾಡಿ, ದಿನನಿತ್ಯ ಬಿಡುವು ಮಾಡಿಕೊಂಡು ಯೋಗಾಭ್ಯಾಸಮಾಡಬೇಕು. ಆಹಾರ, ನೀರು ಎಷ್ಟು ಅವಶ್ಯವೋ ಅಷ್ಟೇ ಯೋಗವು ಅವಶ್ಯವಾಗಿದೆ. ಜನರು ಜಾಗೃತರಾಗಿ ಯೋಗದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಪಿಎಸ್‌ಐ ನಾಗರಾಜ ಕೊಟಿಗಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಎಸ್.ವಿ.ಪಾಟೀಲ್, ತಂಬ್ರಹಳ್ಳಿಯ ವಿಎಸ್‌ಎಸ್‌ಎನ್ ಅಧ್ಯಕ್ಷ ಮಾಬುಸಾಬ್, ಸೊಬಟಿ ಹರೀಶ, ಬಣಕಾರ ಕೊಟ್ರೇಶಪ್ಪ, ತಂಬ್ರಹಳ್ಳಿ ಶಾಲಾ ಮುಖ್ಯ ಶಿಕ್ಷಕ ರಾಜೇಶ್ವರಿ, ದೇವಿಪ್ರಸಾದ್, ಎಸ್.ಬಿ.ಐ.ಬ್ಯಾಂಕ್ ನಿವೃತ್ತ ನೌಕರ ಗಣೇಶ ಹವಾಲ್ದಾರ್, ಸುಣಗಾರ ಪರಶುರಾಮ, ಶಿಕ್ಷಕಿ ಪರಿಮಳ ಮತ್ತಿತರರು ಇದ್ದರು.