ಮುದ್ದಟನೂರು ಗ್ರಾಮದ ಈದ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಜಾಮಿಯಾ ಸುನ್ನಿ ಮಸೀದಿಯ ಇಮಾಮ್ ಆಮಿರ್ ಅಶ್ ಅರೀ ಬನ್ನೂರು ಪ್ರವಚನ ನೀಡಿದರು.  
ಬಳ್ಳಾರಿ

ಅಲ್ಲಾಹನ ಆರಾಧನೆಯೇ ಹಬ್ಬದ ಆಶಯ

ಪ್ರಮುಖ ಮುಖ್ಯಾಂಶಗಳು

  • ಇಮಾಮ್ ಆಮಿರ್ ಅಶ್ ಅರೀ ಬನ್ನೂರು ಹೇಳಿಕೆ
  • ಮುದ್ದಟನೂರು ಈದ್ಗಾದಲ್ಲಿ ವಿಶೇಷ ಪ್ರಾರ್ಥನೆ
ಸಿರಗುಪ್ಪ: ಬಕ್ರೀದ್ ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಇಸ್ಲಾಮಿನ ಪಂಚಸ್ಥಂಭಗಳಲ್ಲಿ ಒಂದಾಗಿರುವ ಹಜ್ ಕರ್ಮವು ಪ್ರಸ್ತುತ ಹಬ್ಬದೊಂದಿಗೆ ನಡೆಯುತ್ತದೆ ಎಂದು ಜಾಮಿಯಾ ಸುನ್ನಿ ಮಸೀದಿಯ ಇಮಾಮ್ ಆಮಿರ್ ಅಶ್ ಅರೀ ಬನ್ನೂರು ಹೇಳಿದರು.
ಮುದ್ದಟನೂರು ಗ್ರಾಮದ ಈದ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಮಾತನಾಡಿದರು. ಬಕ್ರೀದ್ ಆಚರಣೆಯೊಂದಿಗೆ ಹಜ್ ಕರ್ಮವು ಸಮಾಪ್ತಿಗೊಳ್ಳುತ್ತದೆ. ಖುರ್ಬಾನಿಯೂ ವಿಶೇಷ ಮತ್ತು ಪುಣ್ಯ ಕಾರ್ಯವಾಗಿದೆ. ಮಹಾತ್ಮರನ್ನು ಸ್ಮರಿಸಿ, ಅಲ್ಲಾಹನನ್ನು ಆರಾಧಿಸುವುದು ಬಕ್ರೀದ್ ಹಬ್ಬದ ಆಶಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಕುತುಬಾ ಪಾರಾಯಣ, ನಮಾಝ್ ಮಾಡಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸಲಾಯಿತು.
64-ಹಳೇಕೋಟೆ: ತೆಕ್ಕಲಕೋಟೆ ಸಮೀಪದ 64-ಹಳೇಕೋಟೆ ಗ್ರಾಮದ ಸೈಯದ್ ಖಾಸೀಂವಲಿ ಸಾಹೇಬ್ ದರ್ಗಾದ ಬಳಿಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪಾರ್ಥನೆ ಸಲ್ಲಿಸಿದರು. ಪ್ರಮುಖರಾದ ಖತೀಬ್ ಹಳೇಕೋಟೆ, ಸುಭಾನ್ ಸಾಬ್, ಮುಜಾವರ್ ಶೇಕ್ ಸಾಬ್, ತೆಕ್ಕಲಕೋಟೆ ಮತ್ತು ಹಳೇಕೋಟೆ ಗ್ರಾಮದ ಮುಸ್ಲಿಮರು ಇದ್ದರು.