ಹರಪನಹಳ್ಳಿ ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಶ್ರೀ ಪಂಚಾಕ್ಷರಿ ಶಿವಾಚಾರ್ಯರು ಮಾತನಾಡಿದರು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪಾಂತ ಸಹ ಸಂಯೋಜಕ ಸತೀಶ್ ಪೂಜಾರ್, ಶ್ರೀ ಪಂಚಾಕ್ಷರಿ ಶಿವಾಚಾರ್ಯರು, ಪ್ರಭುಸ್ವಾಮೀಜಿ, ಸಮ್ಮೇಳನದ ತಾಲೂಕು ಅಧ್ಯಕ್ಷ ಬಣಕಾರ ರೇವಣಸಿದ್ದಪ್ಪ, ಕಾರ್ಯದರ್ಶಿ ಸುರೇಂದ್ರ ಬಾಬು ಇತರರಿದ್ದರು. 
ಬಳ್ಳಾರಿ

ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ

ಹರಪನಹಳ್ಳಿ: ಕಾಲೇಜು ಹಂತದಲ್ಲಿ ಶೇ.50 ವಿದ್ಯಾರ್ಥಿಗಳು ಡ್ರಗ್ಸ್ ಹಾಗೂ ಲವ್ ಜಿಹಾದ್‌ಗಳಿಗೆ ಬಲಿಯಾಗುತ್ತಿದ್ದಾರೆ. ಹಿಂದೂ ಯುವತಿಯರು ಜಾಗೃತರಾಗಬೇಕು. ಹಿಂದೂ ಸಂಸ್ಕೃತಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಸಹ ಸಂಯೋಜಕ ಸತೀಶ್ ಪೂಜಾರ್ ಹೇಳಿದರು.
ತಾಲೂಕಿನ ಬೆಣ್ಣಿಹಳ್ಳಿ ಗ್ರಾಮದ ಕೆಬಿಜೆ ಪ್ರೌಢಶಾಲೆಯಲ್ಲಿ ಗ್ರಾಮದ ಹಿಂದೂ ಸಮ್ಮೇಳನ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದರು. ಸಮ್ಮೇಳನ ಹಿಂದೂಗಳ ಒಗ್ಗಟ್ಟಿಗಾಗಿ ಆಯೋಜಿಸಲಾಗಿದೆ ವಿನಹ ಯಾರ ವಿರುದ್ಧವಲ್ಲ. ಜಾತಿ ಭೇದ ದೂರ ಮಾಡಿ ಹಿಂದೂಗಳ ಏಕತೆ ಹಾಗೂ ಭಾರತ ವಿಶ್ವ ಗುರು ಆಗುವ ಮಹತ್ತರದ ಉದ್ದೇಶವೇ ಆರೆಸ್ಸೆಸ್ ಗುರಿಯಾಗಿದೆ. ಶಾಸ್ತ್ರ ಪರಂಪರೆಯನ್ನು ವಿಶ್ವಕ್ಕೆ ತಿಳಿಸಬೇಕಾಗಿದೆ.
ಇತಿಹಾಸ ತಿಳಿಯದ ಮೂಡರು ಅವರ ಮೆರವಣಿಗೆ ಮೇಲೆ ಕಲ್ಲು ತೂರಿ ಅವಹೇಳನ ಮಾಡಿರುವುದಕ್ಕೆ ತಕ್ಕ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ. ಸನತಾನ ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲ ಧರ್ಮಗಳ ಬುನಾದಿ ಹಿಂದೂ ಧರ್ಮ. ಶರೀಫ್, ಕಲಾಂರನ್ನು ಪೂಜಿಸುವ ಹಿಂದೂ ಧರ್ಮ ಮುಸ್ಲಿಂರನ್ನು ಧ್ವೇಷಿಸಿಸುವುದಿಲ್ಲ. ಹಿಂದೂಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಸಂವಿಧಾನ ಉಳಿಯುತ್ತದೆ. ಇಲ್ಲವಾದರೆ ಷರಿಯ ಕಾನೂನುಗಳ ಬಾಹುಗಳು ಚಾಚುತ್ತವೆ ಎಂದರು.
ಶ್ರೀ ಪಂಚಾಕ್ಷರಿ ಶಿವಾಚಾರ್ಯರು ಮಾತನಾಡಿ, ದೇಶದ ರೈತರು ಧಣಿಗಳಂತೆ ಮೆರೆಯಬೇಕು. ವಿಜಯನಗರ ಜಿಲ್ಲೆ ಸಾಮಾನ್ಯ ಸ್ಥಳವಲ್ಲ. ಅತಿರತ ಮಹಾರನ್ನು ಕಂಡ ನಾಡು. ಹಿಂದೂ ಸಂಸ್ಕೃತಿಯ ನೆಲೆಬೀಡು ಎಂದು ತಿಳಿಸಿದರು. ಬೃಹತ್ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಆರೆಸ್ಸೆಸ್ ಕುಟುಂಬ ಪ್ರಭೋದನ ಪ್ರಮುಖ ಕೃಷ್ಣಮೂರ್ತಿ, ತಾಲೂಕು ಕಾರ್ಯವಾಹಕ ಗೌಳಿ ಪಶುಪತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಕಾರ್ಯಕಾರಿ ಸಮಿತಿ ಸದಸ್ಯರಾದ ಗೌರಿಹಳ್ಳಿ ನಾಗರಾಜ, ಚಿರಸ್ತಹಳ್ಳಿ ಬಿ.ಮೌನೇಶ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಉದಯ್ ಕುಮಾರ್, ಪ್ರಮುಖರಾದ ಜಿ.ನಂಜನಗೌಡ, ಓಂಕಾರಗೌಡ, ಮುತ್ತಿಗಿ ವಾಗೀಶ್, ಕಡೇಮನಿ ಸಂಗಮೇಶ ಇತರರಿದ್ದರು.