ಬಳ್ಳಾರಿಯ ರೇಡಿಯೋ ಪಾರ್ಕ್‌ನಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹೊರನೋಟ. 
ಬಳ್ಳಾರಿ

ಕಟ್ಟಡ ನಿರ್ಮಾಣಕ್ಕೆ ಕಾಯುತ್ತಿರುವ ಮಹಿಳಾ ಕಾಲೇಜು

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷದಿಂದ ಕಾಮಗಾರಿ ಆರಂಭವಾಗಿಲ್ಲ
  • ಅನುದಾನದಕ್ಕಿಲ್ಲ ಅನುಮೋದನೆ

ಬಳ್ಳಾರಿ :

ನಗರದಲ್ಲಿರುವ ಜಿಲ್ಲೆಯ ಏಕೈಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಕಳೆದ ಎರಡು ವರ್ಷದ ಹಿಂದ ಭೂಮಿಪೂಜೆ ನಡೆದರೂ ಈವರೆಗೆ ಮಾತ್ರ ಆರಂಭವಾಗಿಲ್ಲ. ಕಳೆದ ಎರಡೂ ವರ್ಷದಿಂದ ಸರ್ಕಾರದಿಂದ ಅನುದಾನಕ್ಕೆ ಅನುಮೋದನೆ ದೊರೆಯದೆ ಕಾರಣ ಕಟ್ಟಡದ ಕಾಮಗಾರಿ ನಿರ್ಮಾಣ ದಿನೇದಿನೆ ವಿಳಂಬವಾಗುತ್ತಿದೆ.

ಈ ಕಾಲೇಜ್ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಧೀನಕ್ಕೆ ಒಳಪಟ್ಟಿದೆ. ಬಿಎ, ಬಿ.ಕಾಂ., ಕೋರ್ಸ್‌ಗಳಿವೆ. ಕಳೆದ ವರ್ಷ 351 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದರು. ಸದ್ಯ, ಪ್ರಸ್ತಕ ಸಾಲಿನಲ್ಲಿ ಬಿಎಸ್ಸಿ ಸೇರಿದಂತೆ ಕೆಲವೊಂದು ಹೊಸ ಕೋರ್ಸ್‌ಗಳ ಆರಂಭಗೊಂಡಿರುವುದರಿಂದ ಪ್ರಸ್ತುತ 461 ವಿದ್ಯಾರ್ಥಿನಿಯರಿಗೆ ಹೆಚ್ಚಿದೆ. ಐದು ಜನ ಕಾಯಂ ಪ್ರಾಧ್ಯಾಪಕರು ಹಾಗೂ 15 ಜನ ಅತಿಥಿ ಉಪನ್ಯಾಸಕರು ಇದ್ದಾರೆ.

ವರ್ಷದಿಂದ ವರ್ಷಕ್ಕೆ ಕಾಲೇಜಿ ದಾಖಲಾತಿ ಹೆಚ್ಚಿಸಲು ಸಿಬ್ಬಂದಿ ಸಕ್ರಿಯ ತೊಡಗಿದ್ದಾರೆ. ಜಿಲ್ಲೆ ಸೇರಿದಂತೆ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂಡ ಪ್ರತಿಷ್ಟಿತ ಖಾಸಗಿ ಕಾಲೇಜುಗಳಿವೆ. ಪ್ರತಿ ಖಾಸಗಿ ಕಾಲೇಜುಗಳು ದಾಖಲಾತಿ ಹೆಚ್ಚಿಸಿಕೊಳ್ಳಲು ಒಂದರ ಮೇಲೆ ಒಂದರಂತೆ ಪೈಪೋಟಿಗೆ ಇಳಿಯುತ್ತವೆ. ಆದರೆ, ಸೌಲಭ್ಯಗಳ ಕೊರತೆ ನಡುವೆಯೂ ಒಂದೇ ವರ್ಷದಲ್ಲೇ 110 ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿಸಿಕೊಂಡಿರುವುದು ಗಮರ್ನಾಹ ಸಾಧನೆಯಾಗಿದೆ. ಸದ್ಯ, ಕಾಲೇಜು ಕಟ್ಟಡದಲ್ಲಿ ಆರು ಕೊಠಡಿಗಳಿದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚವಾಗಿರುವುದರಿಂದ ಆವರಣದಲ್ಲಿರುವ ಶಾಲೆಯ ನಾಲ್ಕು ಕೊಠಡಿಗಳಲ್ಲಿ ಬೋಧಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಮೆಚ್ಚುಗೆ ಕಾಲೇಜ್‌ಯಾಗಿದೆ.

ಅನುಮೋದನೆ ದೊರೆತಿಲ್ಲ : 2024ರಲ್ಲಿ ಜಿಲ್ಲಾ ಕ್ರೀಡಾಂಗಣದ ಬಳಿಯ 2.80 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಶಾಸಕ ಬಿ.ನಾಗೇಂದ್ರ ಅವರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದಾಗ ವಿಧಾನಸಭಾ ಕ್ಷೇತ್ರದ ಕಾಮಗಾರಿಗಳ ವಿಶೇಷ ಅನುದಾನದಡಿ 25 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಮುಂದಾಗಿದ್ದರು. ಆದರೆ, ಭೂಮಿಪೂಜೆ ನೆರವೇರಿದ ಕೆಲ ತಿಂಗಳಲ್ಲೇ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಸರ್ಕಾರದಿಂದ ಅನುದಾನಕ್ಕೆ ಅನುಮೋದನೆ ದೊರೆಯಿಲಿಲ್ಲ. ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಅವರು ವಿಶೇಷ ಅನುದಾನದಡಿ ಹಣ ಬಿಡುಗಡೆಗೊಳಿಸಬೇಕು. ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿರುವ ಸ್ಥಳ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದು ಹೋಗಲು ಅನುಕೂಲಕರವಾಗಲಿದೆ ಎಂಬ ಉದ್ದೇಶದಿಂದ ಕಾಲೇಜು ಆಡಳಿತ ಮಂಡಳಿ ಮನವಿ ಸಲ್ಲಿಸಿದರೂ ಸಚಿವರು ಗಮನ ಹರಿಸಲಿಲ್ಲ. ಸದ್ಯ, ಭೂಮಿಪೂಜೆ ನೆರವೇರಿಸದ ಶಾಸಕ ಬಿ.ನಾಗೇಂದ್ರ ಮತ್ತೋಮ್ಮೆ ಸಚಿವರಾಗಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಅನುದಾನಕ್ಕೆ ಅನುಮೋದನೆ ನೀಡಿದರೆ ನೂರರು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ.
ದಾಖಲಾತಿ ಹೆಚ್ಚಳಕ್ಕೆ ಶ್ರಮ : ನಗರದಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭವಾಗಿ ಹತ್ತಕ್ಕೂ ಅಧಿಕ ವರ್ಷ ಕಳೆದಿದೆ. ಕಾಲೇಜಿನ ಬೋಧಕ ಮತ್ತು ಬೋಧಕತೇರ ಸಿಬ್ಬಂದಿ ರಜಾ ದಿನಗಳಲ್ಲಿ ವಾಹನ ಬಾಡಿಗೆ ಪಡೆದು ಮೈಕ್ ಅಳವಡಿಸಿಕೊಂಡು ಸಮೀಪದ ಗ್ರಾಮಗಳಲ್ಲಿ ಸರ್ಕಾರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವಂತೆ ಪಾಲಕರು ಹಾಗೂ ವಿದ್ಯಾರ್ಥಿಗಳ ಮನವರಿಕೆ ಮಾಡುತ್ತಾರೆ. ಈ ಶ್ರಮದಿಂದ ಒಂದೇ ವರ್ಷದಲ್ಲೇ ನೂರು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇನ್ನೂ ಸ್ವಂತ ಕಟ್ಟಡ ಹಾಗೂ ಅತ್ಯಾಧುನಿಕ ಸೌಲಭ್ಯ ಒದಗಿಸದರೆ ಈ ಸಂಖ್ಯೆ ಮತ್ತು ಮತ್ತಷ್ಟು ಹೆಚ್ಚಳವಾಗಲಿದೆ.
"

ಕೋಟ್... ಈಗಾಗಲೇ ಕಾಲೇಜು ಸಿಬ್ಬಂದಿ ಸಚಿವ ಬಿ.ನಾಗೇಂದ್ರ ಅವರನ್ನು ಭೇಟಿಯಾಗಿ ಕಟ್ಟಡ ನಿರ್ಮಾಣದ ಬಗ್ಗೆಗ ಮನವಿ ಮಾಡಿದ್ದಾರೆ. ಮನವಿಗೆ ಸಚಿವರು ಸ್ಪಂದಿಸಿ, ಕೆಲ ದಿನಗಳಲ್ಲೇ ಅನುದಾನಕ್ಕೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ.- ಡಾ.ಕೆ.ಪ್ರಜ್ಞಾ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ, ಬಳ್ಳಾರಿ.