ಸ್ಕೂಟಿಗೆ ಲಾರಿ ಡಿಕ್ಕಿ 
ಬಳ್ಳಾರಿ

ಸ್ಕೂಟಿಗೆ ಲಾರಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ

ಪ್ರಮುಖ ಮುಖ್ಯಾಂಶಗಳು

  • ಗಂಭೀರ
  • ಚಾಲಕ
  • ಮಹಿಳೆ
ಸ್ಕೂಟಿಗೆ ಲಾರಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ
ಬಳ್ಳಾರಿ : ನಗರದ ಬೆಳಗಲ್ ಕ್ರಾಸ್‌ನಲ್ಲಿ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಇಲ್ಲಿನ ಗೌತಮನಗರದ ನಿವಾಸಿ ವರಲಕ್ಷ್ಮಿ ಎಂಬುವವರು ಮಗಳೊಂದಿಗೆ ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ವೇಳೆ, ಲಾರಿ ಚಾಲಕನ ನಿಯಂತ್ರಣ ತಪ್ಪಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮಹಿಳೆಯ ಎರಡು ಕಾಲುಗಳ ಮೇಲೆ ಲಾರಿ ಹರಿದಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಿದ್ದು, ಕೂಡಲೇ ತಾಯಿ ಹಾಗೂ ಮಗುವನ್ನು ಸ್ಥಳೀಯರು ಬಿಮ್ಸ್ ದಾಖಲಿಸಲಾಗಿದೆ. ಲಾರಿ ವಶಕ್ಕೆ ಪಡೆದು, ಲಾರಿ ಚಾಲಕನ ವಿರುದ್ಧ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===