ಸಿರಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಿಂದ ಆಯೋಜಿಸಿದ್ದ ಉಚಿತ ತಪಾಸಣೆ ಶಿಬಿರದಲ್ಲಿ ಆಶಾ ಕಾರ್ಯಕರ್ತೆಯರು ಹೆಸರು ನೋಂದಣಿ ಮಾಡಿಕೊಂಡರು.
- ಡಾ.ಸುನಿಲ್ ಕುಮಾರ್ ಹೇಳಿಕೆ
- ಕಣ್ಣಿನ ಉಚಿತ ತಪಾಸಣೆ ಶಿಬಿರ
ಸಿರಿಗೇರಿ: ಶಾರೀರಿಕವಾಗಿ ಕಣ್ಣುಗಳು ಅತ್ಯಗತ್ಯವಾಗಿದ್ದು, ಕಣ್ಣುಗಳು ಇಲ್ಲದಿದ್ದರೆ ಪ್ರಪಂಚವೇ ಶೂನ್ಯ ಎಂದು ಡಾ.ಸುನಿಲ್ ಕುಮಾರ್ ಹೇಳಿದರು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ವೈದ್ಯರಾದ ಪ್ರತ್ಯುನ್ಯ, ಸುನಿಲ್ ಕುಮಾರ್, ಕೃಷ್ಣ, ನಾಗರಾಜ ಪೂಜಾರಿ, ಆರೋಗ್ಯ ನಿರೀಕ್ಷಣಾಧಿಕಾರಿ ಶಿವಾನಂದಪ್ಪ, ಸತೀಶ, ಗಂಗಮ್ಮ, ಸಾಧಕಲಿ, ಶ್ರುತಿ, ಷಣ್ಮುಖ, ಅರುಣ ಕುಮಾರಿ ಇತರರಿದ್ದರು.