ಕಂಪ್ಲಿಯ ಶ್ರೀ ರಾಘವೇಂದ್ರಸ್ವಾಮಿ ಶಾಖಾಮಠದಲ್ಲಿ ಮಧ್ಯಾರಾಧನೆ ನಿಮಿತ್ತ ರಾಯರ ಬೃಂದಾವನ್ನು ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶಾಸಕ ಜೆ.ಎನ್.ಗಣೇಶ್, ಮಠದ ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್ ಇದ್ದರು.  
ಬಳ್ಳಾರಿ

ಇಷ್ಟಾರ್ಥ ಸಿದ್ಧಿಸುವ ಕಾಮಧೇನು

ಪ್ರಮುಖ ಮುಖ್ಯಾಂಶಗಳು

  • ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ
  • ಮಧ್ಯಾರಾಧನೆ
ಕಂಪ್ಲಿ: ಸತ್ಯನಾರಾಯಣಪೇಟೆಯ ಮದ್ವಾಚಾರ್ಯರ ಮೂಲಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಶಾಖಾ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ ನಿಮಿತ್ತ ಮಧ್ಯಾರಾಧನೆ ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರಸಹಿತ ಫಲ ಪಂಚಾಮೃತಾಭಿಷೇಕ, ಕನಕಾಭಿಷೇಕ, ಅಲಂಕಾರ, ಬ್ರಾಹ್ಮಣರ ಅನ್ನಸಂತರ್ಪಣೆ, ರಥೋತ್ಸವ, ತೊಟ್ಟಿಲು ಸೇವೆ, ಬೆಂಗಳೂರಿನ ನಿಧಿರೆಡ್ಡಿ, ಟಿ.ಎ. ನಾಗಶ್ರೀ ತಂಡದಿಂದ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಗಳು ಜರುಗಿದವು.
ಶಾಸಕ ಜೆ.ಎನ್.ಗಣೇಶ್ ಮಠದ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು, ರಾಘವೇಂದ್ರ ಸ್ವಾಮಿಗಳನ್ನು ಏಕಭಕ್ತಿಯಿಂದ ಆರಾಧಿಸಿದರೆ ಇಷ್ಟಾರ್ಥಗಳನ್ನು ಸಿದ್ದಿಸುವ ಕಾಮಧೇನು ಕಲ್ಪವೃಕ್ಷ ಎಂದರು.
ಮಠದ ವಿಚಾರಣಾಕರ್ತ ಟಿ.ಕೊಟ್ರೇಶ, ವ್ಯವಸ್ಥಾಪಕ ಪುರುಷೋತ್ತಮಾಚಾರ್, ಅರ್ಚಕ ವಿಜಯೇಂದ್ರ, ವಿವಿಧ ಗ್ರಾಮಗಳ ಭಕ್ತರು ಇದ್ದರು. ರಾಯರ ಬೃಂದಾವನವನ್ನು ಪುಷ್ಪ, ರಜತ ಮುಖವಾಡಗಳಿಂದ ಅಲಂಕರಿಸಲಾಗಿತ್ತು.