ಸಂಡೂರು ತಾಲೂಕಿನ ವಡ್ಡು ಗ್ರಾಪಂನ ಕೊಳಾಯಿ ಮುಂದೆ ನಿಂತಿರುವ ಮಹಿಳೆಯರು. 
ಬಳ್ಳಾರಿ

ವಡ್ಡು ಗ್ರಾಮದಲ್ಲಿ ನೀರಿನ ಬವಣೆ

ಸಂಡೂರು: ತಾಲೂಕಿನ ವಡ್ಡು ಗ್ರಾಮದ ಒಂದನೇ ವಾರ್ಡಿನಲ್ಲಿ ಐದಾರು ದಿನಗಳಿಂದ ಕುಡಿವ ನೀರು ಸರಬರಾಜಾಗದೆ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಮಸೀದಿ ಓಣಿಯಲ್ಲಿ ಎರಡು ಮೂರು ವರ್ಷಗಳಿಂದ ನೀರಿನ ಸಮಸ್ಯೆ ಕಾಡುತ್ತಿದ್ದರೂ ಗ್ರಾಪಂನವರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ವಾರ್ಡಿನ ನಲವತ್ತು ಮನೆಗಳು ದಿಬ್ಬದ ಮೇಲಿದ್ದು, ಕೊಳಾಯಿ ನೀರು ಏರುತ್ತಿಲ್ಲ. ಜೆಜೆಎಂ ಅಡಿ ಕೊಳಾಯಿ ಹಾಕಲು ತೆಗ್ಗು ತೋಡಿ ಕೆಲವೆಡೆ ಹಾಗೆಯೇ ಬಿಡಲಾಗಿದೆ. ಆಗಸರ ಓಣಿಯಲ್ಲಿರುವ ಓವರ್ ಹೆಡ್ ಟ್ಯಾಂಕ್‌ನಲ್ಲಿ ಸ್ವಚ್ಛತೆಯಿಲ್ಲ.
ದೇವಮ್ಮನ ಗುಡಿ ಮುಂಭಾಗದಲ್ಲಿ 2023ರ ನ.13ರಂದು ಬೋರ್ ಕೊರೆಯಿಸಲಾಯಿತಾದರೂ ಇನ್ನೂ ಮೋಟಾರ್ ಕೂಡಿಸಿಲ್ಲ. ಕೊಳವೆ ಬಾವಿ ದುರಸ್ತಿಗೆ ಬಂದಿದ್ದು, ಯಾರೂ ಗಮನ ಹರಿಸುತ್ತಿಲ್ಲ. ಕಳೆದ ತಿಂಗಳಲ್ಲಿ ಎರಡನೇ ಮೋಟಾರ್ ಬಾರಿ ಸುಟ್ಟಿದ್ದರೂ ರಿಪೇರಿ ಮಾಡಿಲ್ಲ ಎಂದು ಮಹಿಳೆಯರು ದೂರಿದ್ದಾರೆ.
"

ಪಿಡಿಒಗಳಿಗೆ ಮನವಿ ಪತ್ರಗಳನ್ನು ಕೊಟ್ಟು ಸಾಕಾಗಿದೆ. ಗ್ರಾಪಂನವರು ನಮ್ಮನ್ನು ಸ್ಥಳೀಯ ನಿವಾಸಿಗಳು ಎಂದು ಪರಿಗಣಿಸುತ್ತಿಲ್ಲ.

"

ವಡ್ಡು ಗ್ರಾಮದ ಒಂದನೇ ವಾರ್ಡಿನ ಮಸೀದಿ ಓಣಿಯಲ್ಲಿ ಕೆಟ್ಟ ಮೋಟಾರನ್ನು ದುರಸ್ತಿ ಮಾಡಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ನೀರಿನ ಟ್ಯಾಂಕನ್ನು ಸ್ವಚ್ಛ ಪಡಿಸಲು ಕ್ರಮ ಕೈಗೊಳ್ಳುತ್ತೇನೆ.