ಅಡವಿ ಆನಂದದೇವನಹಳ್ಳಿಯಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸದಂತೆ ಆಗ್ರಹಿಸಿ ಗ್ರಾಮಸ್ಥರು ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥಗೆ ಮನವಿ ಸಲ್ಲಿಸಿದರು. ಬಾಬು ಜಗಜೀವನರಾಮ್ ವೇದಿಕೆ ತಾಲೂಕು ಅಧ್ಯಕ್ಷ ಪ್ರಭಾಕರ, ವಕೀಲ ಲಿಂಗರಾಜು, ಪ್ರಮುಖರಾದ ಎಚ್.ಶಿವರಾಜ, ಸಕ್ರಪ್ಪ, ಒ.ಬಸವರಾಜ, ಯು.ಮಾಯಪ್ಪ, ಹೊಸೂರು ಭರಮಲಿಂಗಪ್ಪ, ಎಚ್. ಕೊಟ್ರೇಶ ಇದ್ದರು. 
ಬಳ್ಳಾರಿ

ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆ ಸಲ್ಲ

ಪ್ರಮುಖ ಮುಖ್ಯಾಂಶಗಳು

  • ಅಡವಿ ಆನಂದದೇವನಹಳ್ಳಿ ಗ್ರಾಮಸ್ಥರ ಆಗ್ರಹ
  • ಹಗರಿಬೊಮ್ಮನಹಳ್ಳಿ ತಾಪಂ ಇಒಗೆ ಮನವಿ
ಹಗರಿಬೊಮ್ಮನಹಳ್ಳಿ: ಅಡವಿ ಆನಂದದೇವನಹಳ್ಳಿಯಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸದಂತೆ ಆಗ್ರಹಿಸಿ ಗ್ರಾಮಸ್ಥರು ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥಗೆ ಮನವಿ ಸಲ್ಲಿಸಿದರು.
ಗ್ರಾಮದ ಪ್ರಮುಖ ಎಚ್.ಕೊಟ್ರೇಶ ಮಾತನಾಡಿ, ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದರಿಂದ ದುರ್ವಾಸನೆ ಹರಡಿ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ತಾಲೂಕು ಕೇಂದ್ರ ಸ್ಥಾನದಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಪಟ್ಟಣದ ತ್ಯಾಜ್ಯವನ್ನು ಅಲ್ಲೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು.
ಗ್ರಾಮೀಣ ಪ್ರದೇಶದಲ್ಲಿ ಘಟಕ ನಿರ್ಮಿಸಬಾರದು ಎಂದು ಒತ್ತಾಯಿಸಿದರು. ಬಾಬು ಜಗಜೀವನರಾಮ್ ವೇದಿಕೆ ತಾಲೂಕು ಅಧ್ಯಕ್ಷ ಪ್ರಭಾಕರ, ವಕೀಲ ಲಿಂಗರಾಜು, ಪ್ರಮುಖರಾದ ಎಚ್.ಶಿವರಾಜ, ಸಕ್ರಪ್ಪ, ಒ.ಬಸವರಾಜ, ಯು.ಮಾಯಪ್ಪ, ಹೊಸೂರು ಭರಮಲಿಂಗಪ್ಪ ಮತ್ತಿತರರು ಇದ್ದರು.