ಬಳ್ಳಾರಿ ತಾಲೂಕಿನ ಹಂದ್ಯಾಳ್ ಗ್ರಾಮದಲ್ಲಿ ಜಡೆಸಿದ್ದೇಶ್ವರ ತಾತನವರ ರಥೋತ್ಸವ ಹಿನ್ನೆಲೆ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿದರು. ಮರಿ ಕೊಟ್ಟೂರು ಸ್ವಾಮೀಜಿ ಇದ್ದರು. 
ಬಳ್ಳಾರಿ

ಧರ್ಮದ ದಾರಿಯಲ್ಲಿ ನಡೆಯಿರಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಧರ್ಮ
ಬಳ್ಳಾರಿ : ದೇವರು ಮನದಲ್ಲಿರಿಸಿಕೊಂಡು ಯಾವುದೇ ಕೆಲಸ, ದಾನ, ನಡೆ ನುಡಿಗಳನ್ನು ಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಜೀವನ ಸ್ವರ್ಗವಿದ್ದಂತೆರುತ್ತದೆ ಎಂದು ಕೊಪ್ಪಳ ಗವಿ ಮಠದ ಶ್ರೀಅಭಿನವ ಗವಿ ಸಿದ್ದೇಶ್ವರ ಸ್ವಾಮಿ ಹೇಳಿದರು.
ತಾಲೂಕಿನ ಹಂದ್ಯಾಳ್ ಗ್ರಾಮದ ಜಡೆಸಿದ್ದೇಶ್ವರ ಮಠದ ಆವರಣದಲ್ಲಿ ಜಡೆಸಿದ್ದೇಶ್ವರ ರಥೋತ್ಸವ ಹಿನ್ನೆಲೆ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮದ ದಾರಿಯಲ್ಲಿ ನಡೆಯುವುದನ್ನು ಕಲಿಯಿರಿ. ನಾನು ಎಂಬ ಅಹಂ ಬಿಟ್ಟರೆ ಮಾತ್ರ ಜೀವನ ನಡೆಸಲು ಸಾಧ್ಯ. ಕಾಲ ಹಾಳಾಗಿದೆ ಎನ್ನುವ ಮನುಜರು ಮೊದಲು ಅವರ ಮನಸ್ಸು, ಭಾವನೆಗಳ ದೃಷ್ಟಿಕೋನವನ್ನು ಬದಲಿಸಿಕೊಳ್ಳುವುದನ್ನು ಕಲಿಯಿರಿ. ಜೀವನದಲ್ಲಿ ಮನುಷ್ಯನಿಗೆ ದುಃಖ ಏಕೆ ಆಗುತ್ತದೆ ಎಂದರೆ ಇರುವುದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳದಿರುವುದೇ ಮೂಲ ಕಾರಣವಾಗಿದೆ ಎಂದರು.
ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮಿಜೀ ಮಾತನಾಡಿದರು. ಪ್ರವಚನ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಆಂಜನೇಯ ಸ್ವಾಮಿ ದೇವಾಲಯದಿಂದ ಜಡೆಸಿದ್ದೇಶ್ವರ ಮಠದ ವರೆಗೆ ಶ್ರೀಕೊಪ್ಪಳ ಗವಿ ಮಠದ ಅಭಿನವ ಗವಿ ಸಿದ್ಧೇಶ್ವರ ಸ್ವಾಮಿ ಹಾಗೂ ಶ್ರೀಧರಗಡ್ಡೆ ಶಾಖಾ ವಿರಕ್ತ ಮಠದ ಮರಿ ಕೊಟ್ಟೂರು ಸ್ವಾಮೀಜಿ ಅವರನ್ನು ಭಜನೆ ಮೂಲಕ ಸ್ವಾಗತಿಸಲಾಯಿತು.