ಮಾ.19ರಂದು ವಾಲಿಬಾಲ್ ಪಂದ್ಯಾವಳಿ
ಬಳ್ಳಾರಿ : ತಾಲೂಕಿನ ಬೆಣಕಲ್ ಗ್ರಾಮದ ಬೀರಪ್ಪ ದೇವಸ್ಥಾನದ ಆವರಣದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.19ರಂದು ಪುರುಷರ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಗ್ರಾಪಂ ಸದಸ್ಯ, ಆಯೋಜಕ ಗಿರೀಶ್ ಪಾಟೀಲ್ ಬಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆ.ಟಿ. ಪೌಂಡೇಷನ್ ಸಂಸ್ಥಾಪಕ ಜೋಳದರಾಶಿ ತಿಮ್ಮಪ್ಪ, ಎಸ್‌ಬಿಐ ಇನ್ಸೂರೆನ್ಸ್ ಜಿಲ್ಲಾ ವ್ಯವಸ್ಥಾಪಕ ಮೂಲಮನೆ ಗಂಗಾಧರ, ದೈಹಕಿ ಶಿಕ್ಷಕ ತೊಂಟಪ್ಪನವರ ಲೋಕರೆಡ್ಡಿ, ಶ್ರೀ ಶಾಂಭವಿ ಟ್ರೇಡರ್ಸ್‌ನ ಚಾಕುಬಂಡೆ ಗಂಗಾಧರ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷ ಟಿ.ಸುರೇಶ್, ದ್ರುವ ಆಸರೆ ಫೌಂಡೇಶನ್ ಸಂಸ್ಥಾಪಕ ಎಂ.ಜಿ.ಕನಕ, ಡಿಸಿಬಿ ಬ್ಯಾಂಕ್ ಆಗ್ರಿಕಲ್ಚರ್ ವ್ಯವಸ್ಥಾಪಕ ಕಡದೂರು ವೀರನಗೌಡ, ಕ್ಯಾನರ್ ಬ್ಯಾಂಕ್ ಫೀಲ್ಡ್ ಆಫೀಸರ್ ತುರುಕಣ್ಣಿ ಬಸವರಾಜ ಉಪಸ್ಥಿತರಲಿದ್ದಾರೆ. ವಿಜೇತ ತಂಡಕ್ಕೆ ಪ್ರಥಮ 10 ಸಾವಿರ ರೂ., ದ್ವಿತೀಯ ಆರು ಸಾವಿರ ರೂ. ನಗದು ನೀಡಲಾಗುವುದು. ಪ್ರತಿ ತಂಡಕ್ಕೆ ಪ್ರವೇಶ ಶುಲ್ಕ 800 ರೂ. ನಿಗದಿ ಮಾಡಲಾಗಿದೆ ಎಂದು ತಿಳಿಸಲಾಗಿದೆ.