ಕೊಟ್ಟೂರಿನ ಎಸ್‌ಬಿಐ ಶಾಖೆ.  
ಬಳ್ಳಾರಿ

ಮಂಜೂರಾಗುತ್ತಿಲ್ಲ ವಿಶ್ವಕರ್ಮ ಯೋಜನೆ ಸಾಲ

ಪ್ರಮುಖ ಮುಖ್ಯಾಂಶಗಳು

  • ಬ್ಯಾಂಕ್‌ಗೆ ಅಲೆದಾಡುತ್ತಿರುವ ಫಲಾನುಭವಿಗಳು
  • ತಾಂತ್ರಿಕ ದೋಷದ ಸಬೂಬು
  • ಬ್ಯಾಂಕ್‌ಗಳ ಮುಂದೆ ಧರಣಿ
ಕೊಟ್ಟೂರು: ಕೇಂದ್ರ ಸರ್ಕಾರದ ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆ ಸಾಲ ಫಲಾನುಭವಿಗಳಿಗೆ ಗಗನಕುಸುಮದಂತಾಗಿದೆ. ಅರ್ಜಿ ಸಲ್ಲಿಸಿ ಒಂದೂವರೆ ತಿಂಗಳಿಂದ ಪಟ್ಟಣದ ಎಸ್‌ಬಿಐ ಶಾಖೆಗೆ ಅಲೆದರೂ ಸಾಲ ಸೌಲಭ್ಯ ದೊರೆಯದಂತಾಗಿದೆ.
ಬಡವರ ಆರ್ಥಿಕ ಪುನಶ್ಚೇತನ, ದೇಶಿಯ ಕರಕುಶಲ ವಸ್ತುಗಳ ಉತ್ಪದನೆ ಹಾಗೂ ದೇಶದ ಪ್ರಗತಿಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ.
ಈ ಯೋಜನೆಗೆ ಅರ್ಜಿ ಹಾಕಿರುವ ಫಲಾನುಭವಿಗಳು ಪಟ್ಟಣದ ಎಸ್‌ಬಿಐ ಶಾಖೆ ಹಾಗೂ ಪಪಂ ಕಚೇರಿಗೆ ಒಂದೂವರೆ ತಿಂಗಳಿಂದ ಅಲೆದಾಡಿದರೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಇಲ್ಲದಂತಾಗಿದೆ. ತಾಂತ್ರಿಕ ದೋಷದಿಂದಾಗಿ ಸಾಲ ಮಂಜೂರು ವಿಳಂಬವಾಗುತ್ತಿದೆ ಎಂಬ ಉತ್ತರ ನೀಡಿ ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳನ್ನು ವಾಪಸ್ ಕಳಿಸುತ್ತಿದ್ದಾರೆ.
"

ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಾಗಿದ್ದು, ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕ್ ಅಧಿಕಾರಿಗಳು ವಿಳಂಬ ಮಾಡಬಾರದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ನಿರ್ಲಕ್ಷೃ ತೋರಿಸಿದರೆ ಅಂತಹ ಬ್ಯಾಂಕ್‌ಗಳ ಮುಂದೆ ಧರಣಿ ನಡೆಸಲಾಗುವುದು.

"

ಪಿಎಂ ಸ್ವನಿಧಿ ಯೋಜನೆಯಡಿ 15 ಸಾವಿರ ರೂ. ಸಾಲಕ್ಕೆ ಪಟ್ಟಣದ ಎಸ್‌ಬಿಐ ಶಾಖೆಗೆ ಅರ್ಜಿ ಸಲ್ಲಿಸಿ ಸುಮಾರು ಮೂರು ತಿಂಗಳಾಗಿದ್ದು, ಇನ್ನೂ ಮಂಜೂರು ಆಗಿಲ್ಲ. ಬ್ಯಾಂಕ್ ವ್ಯವಸ್ಥಾಪಕರನ್ನು ಕೇಳಿದರೆ ಆಪ್ ಸರಿ ಇಲ್ಲ, ಲಾಗಿನ್ ಆಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಸಾಲ ಸಿಗುತ್ತಾ ಇಲ್ಲ ಎಂದು ಕೇಳಿದರೆ ಅರ್ಜಿ ವಾಪಸ್ ತಗೊಂಡು ಹೋಗಿ ಎಂದು ಹೇಳುತ್ತಿದ್ದಾರೆ. ಸಾಲಕ್ಕಾಗಿ ಪಪಂ ಕಚೇರಿ ಹಾಗೂ ಬ್ಯಾಂಕ್ ಶಾಖೆಗೆ ಅಲೆದಾಡಿ ಸಾಕಾಗಿದೆ.

"

ಪಿಎಂ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆಯ ಸಾಲ ಮಂಜೂರಾತ್ರಿ ಪ್ರಕ್ರಿಯೆಗೆ ನಮ್ಮ ಲಾಗಿನ್‌ನಲ್ಲಿ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡದಲ್ಲಿ ವಿಳಂಬವಾಗಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಾಲ ಮಂಜೂರಾದ ಕೂಡಲೆ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.