ಹರಪನಹಳ್ಳಿಯಲ್ಲಿ ‘ಸಂಸಾರದಲ್ಲಿ ಸಾ ನಿ ದಪ’ ಹಾಸ್ಯ ನಾಟಕ ಚಾಲನೆ ಸಂದರ್ಭ ನಂದಿಬೇವೂರು ಮೀನುಗಾರಿಕಾ ಸಂಘದ ಕಾರ್ಯದರ್ಶಿ ಬಾರಿಕಿ ರವಿ, ನಿವೃತ್ತ ಶಿಕ್ಷಕ ಅಂಬ್ಲಿ ವಾಗೀಶ್ ಇತರರಿದ್ದರು. 
ಬಳ್ಳಾರಿ

ವಾಸ್ತವ ದರ್ಶನ ಮಾಡಿಸುವ ರಂಗಭೂಮಿ

ಶಾಮಸುಂದರ್ ಕೊಪ್ಪಳಕರ್
ಹರಪನಹಳ್ಳಿ: ವಾಸ್ತವವನ್ನು ನೇರವಾಗಿ ಕಣ್ಮುಂದೆ ತಿಳಿಸುವ ಏಕೈಕ ವೇದಿಕೆ ರಂಗಭೂಮಿ ಎಂದು ನಂದಿಬೇವೂರು ಮೀನುಗಾರಿಕಾ ಸಂಘದ ಕಾರ್ಯದರ್ಶಿ ಬಾರಿಕಿ ರವಿ ತಿಳಿಸಿದರು.
ನಗರದ ಹಡಗಲಿ ರಸ್ತೆಯಲ್ಲಿರುವ ದೇವೀರಮ್ಮ ಸಭಾ ಮಂಟಪದಲ್ಲಿ ಸಮಸ್ತರು ಸಾಂಸ್ಕೃತಿಕ ಸಂಘ ಹಾಗೂ ಸಿರಿಗೇರಿ ಧಾತ್ರಿ ಕಲಾ ತಂಡದ ಸಹಯೋಗದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ‘ಸಂಸಾರದಲ್ಲಿ ಸಾನಿ ದ ಪ’ ಹಾಸ್ಯ ನಾಟಕ ಪ್ರದರ್ಶನ ಚಾಲನೆ ಸಂದರ್ಭ ಮಾತನಾಡಿದರು.
ಸಿನಿಮಾಗಳು ಕಾಲ್ಪನಿಕತೆಯನ್ನು ಬಿತ್ತರಿಸಿದರೆ, ಬದುಕಿನ ವಾಸ್ತವ ಚಿತ್ರಣವನ್ನು ನಾಟಕಗಳು ಪ್ರದರ್ಶನ ಮಾಡುತ್ತವೆ ಎಂದರು. ನಿವೃತ್ತ ಶಿಕ್ಷಕ ಅಂಬ್ಲಿ ವಾಗೀಶ್ ಮಾತನಾಡಿದರು. ಪ್ರಮುಖರಾದ ಆನಂದ್, ಪೂರ್ಣಿಮಾ, ಹೇಮಣ್ಣ ಮೋರಿಗೆರೆ, ಅರುಣ್ ಇದ್ದರು.