ಕುಂಚೂರು ಗ್ರಾಮದಲ್ಲಿ ವಿಕಸಿತ ಭಾರತ-ಉದ್ಯೋಗ ಖಾತ್ರಿ ಹಾಗೂ ಅಜೀವಿಕ ಅಭಿಯಾನ ಯೋಜನೆಯಡಿ ಗ್ರಾಮ ಸಭೆ ನಡೆಸಲಾಯಿತು. ತಾಪಂ ಎಡಿ ಸೋಮಶೇಖರ ಯು.ಎಚ್., ಪಿಡಿಒ ಟಿ.ಅಂಜಿನಪ್ಪ, ಟಿಐಇಸಿ ವಸಿಗೇರಪ್ಪ ಕೆ.ಚಾಗನೂರು, ಕಾರ್ಯದರ್ಶಿ ಕೆಂಚಪ್ಪ, ಡಿಇಒ ಚಂದ್ರಶೇಖರ್, ಜಿಕೆಎಂ ಮಂಜುಳಾ, ಪ್ರಮುಖರಾದ ಸಂಜೀವಪ್ಪ, ಚನ್ನಬಸವನಗೌಡ, ರೈತ ಮುಖಂಡರು, ಕಾಯಕ ಬಂಧುಗಳು, ಸ್ವಸಹಾಯ ಸಂಘದ ಸದಸ್ಯರು, ಕೂಲಿ ಕಾರ್ಮಿಕರು ಇದ್ದರು. 
ಬಳ್ಳಾರಿ

ವಿಬಿ ಜಿ ರಾಮ್ ಜಿಯಿಂದ ತಪ್ಪಲಿದೆ ವಲಸೆ

ಪ್ರಮುಖ ಮುಖ್ಯಾಂಶಗಳು

  • ತಾಪಂ ಎಡಿ ಸೋಮಶೇಖರ ಯು.ಎಚ್. ಹೇಳಿಕೆ
  • ಹರಪನಹಳ್ಳಿ ಕುಂಚೂರು ಗ್ರಾಮದಲ್ಲಿ ಗ್ರಾಮಸಭೆ
ಹರಪನಹಳ್ಳಿ: ರೈತರಿಗೆ ಸಕಾಲಕ್ಕೆ ಕೃಷಿ ಕಾರ್ಮಿಕರು ಸಿಗದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ವಿಬಿ ಜಿ ರಾಮ್ ಜಿ ಯೋಜನೆಯಡಿ ಅವಕಾಶ ಕಲ್ಪಿಸಲಾಗಿದೆ ಎಂದು ತಾಪಂ ಎಡಿ ಸೋಮಶೇಖರ ಯು.ಎಚ್. ತಿಳಿಸಿದರು.
ಕುಂಚೂರು ಗ್ರಾಮದಲ್ಲಿ ವಿಕಸಿತ ಭಾರತ-ಉದ್ಯೋಗ ಖಾತ್ರಿ ಹಾಗೂ ಅಜೀವಿಕ ಅಭಿಯಾನ ಯೋಜನೆಯಡಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿ ಜಿ ರಾಮ್ ಜಿ ಜುಲೈ 1ರಂದು ಅನುಷ್ಠಾನಗೊಳಿಸುವ ಮುನ್ನ ಸ್ಥಳೀಯ ಹಂತದಲ್ಲಿ ಕೃಷಿ ಕ್ಯಾಲೆಂಡರ್ ಸಿದ್ಧಗೊಳಿಸಲು ಸಭೆ ಆಯೋಜಿಸಲಾಗಿದೆ.
ಇದರಂತೆ ಈ ಯೋಜನೆಯಿಂದ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡೆತಡೆ ಆಗುವುದಿಲ್ಲ. ಸರ್ಕಾರದ ಹೊಸ ಯೋಜನೆಯಿಂದ ಕೃಷಿ ಮತ್ತು ಕಾರ್ಮಿಕರ ಸಂಬಂಧ ಭದ್ರವಾಗಿರಲಿದೆ. ರೈತರು ಸಕಾಲದಲ್ಲಿ ಕಾರ್ಯಗಳನ್ನು ಮುಗಿಸಲು ಅನುಕೂಲವಾಗಲಿದೆ. ಸ್ಥಳೀಯರಿಗೆ ಕೂಲಿ ಸಿಗುವುದರಿಂದ ವಲಸೆ ತಪ್ಪುತ್ತದೆ ಎಂದರು.