ಕುರುಗೋಡಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ಸಂಸ್ಥಾಪನಾ ದಿನ ಆಚರಿಸಲಾಯಿತು.
ಕುರುಗೋಡು: ಸಿದ್ಧಾಂತ ಆಧರಿಸಿ ಬಡವರು, ದೀನ ದಲಿತರ ಏಳಿಗೆಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಈ ಮೂಲಕ ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತಿದೆ ಎಂದು ಪಕ್ಷದ ಮಂಡಲ ಅಧ್ಯಕ್ಷ ಮದಿರೆ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಕಂಪ್ಲಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನದ ಪ್ರಯುಕ್ತ ಪಕ್ಷದ ಧ್ವಜಾರೋಹಣ ನೆರವೇರಿಸಿ ಸೋಮವಾರ ಮಾತನಾಡಿದರು. ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಿದ್ಧಾಂತದ ಮೇಲೆ ಬಿಜೆಪಿ ಸ್ಥಾಪನೆಯಾಗಿದ್ದು, ಸೇವಾ ಮನೋಭಾವದಿಂದ ಕಾರ್ಯಕರ್ತರು ಕಾರ್ಯನಿರ್ವಹಿಸಬೇಕು. ಮೂರು ದಶಕದ ನಂತರ ರಾಜ್ಯಸಭೆಯಲ್ಲಿ ರಾಜಕೀಯ ಪಕ್ಷವೊಂದರ ಸದಸ್ಯರ ಸಂಖ್ಯೆ 100ರ ಗಡಿ ದಾಟಿದೆ. ದೇಶದ ಒಳಿತಿಗಾಗಿ ನಾವೆಲ್ಲರೂ ಹಗಲಿರುಳು ದುಡಿಯಬೇಕಿದೆ. ದೇಶದ ಅಭ್ಯುದಯಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದು, ಅವನ್ನು ಪ್ರಚಾರ ಪಡಿಸುವ ಜತೆಗೆ ಜನರಿಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ತಿಪ್ಪೇರುದ್ರ, ನಟರಾಜ್, ಸಿದ್ದಮ್ಮನಹಳ್ಳಿ ಬಸವರಾಜು, ಕಿರಾಣಿ ಬಾಬು, ಲತಾ, ಸೈಕಲ್ ವೀರಭದ್ರಗೌಡ, ನೀಲಗಲು ಬಸವರಾಜು, ರವೀಂದ್ರ ರೆಡ್ಡಿ ಇದ್ದರು.