ಕಂಪ್ಲಿ ಸತ್ಯನಾರಾಯಣಪೇಟೆಯಲ್ಲಿರುವ ಲಕ್ಷ್ಮೀ ವೆಂಕಟರಮಣ ಮೂರ್ತಿ ಪ್ರತಿಷ್ಠಾಪನೆಯ 44ನೇ ಮಹೋತ್ಸವ ಹಿನ್ನೆಲೆಯಲ್ಲಿ ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಪೂಜೆ ಸಲ್ಲಿಸಿದರು.
ಕಂಪ್ಲಿ: ಪಟ್ಟಣದ ಸತ್ಯನಾರಾಯಣಪೇಟೆ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ್ಮೀ ವೆಂಕಟರಮಣ ಹಾಗೂ ಶ್ರೀ ಶನೈಶ್ಚರ 44ನೇ ಪ್ರತಿಷ್ಠಾಪನಾ ಮಹೋತ್ಸವ ಗುರುವಾರ ಶ್ರದ್ಧೆ, ಭಕ್ತಿಯಿಂದ ನಡೆಯಿತು.
ಶ್ರೀ ಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಸ್ವಾಮೀಜಿ ಮಾತನಾಡಿ, ಲಕ್ಷ್ಮೀ ವೆಂಕಟರಮಣ, ಶನೈಶ್ಚರ ದೇವರಿಗೆ ಪಂಚಾಮೃತಾಭಿಷೇಕ, ಶತ ಅಷ್ಟೋತ್ತರ ಸಂಖ್ಯಾ ನಾರಾಯಣ, ಗಾಯತ್ರಿಪೂರ್ವಕ 108 ಶಂಖಾ ಕ್ಷೀರಾಭಿಷೇಕ, ಪುರುಷಸೂಕ್ತ ಶ್ರೀ ಸೂಕ್ತ ಮಹಾಭಿಷೇಕ, ಅಷ್ಟೋತ್ತರ ಸಹಸ್ರ ನಾಮಾರ್ಚನೆ, ಮಹಾಗಣಪತಿ ಸಹಿತ ಆದಿತ್ಯಾದಿ, ನವಗ್ರಹ ಸಹಿತ ಪುರುಷ ಸೂಕ್ತ, ಶ್ರೀ ಸೂಕ್ತ ಶ್ರೀ ನಾರಾಯಣ ಗಾಯತ್ರಿ, ಮಹಾಲಕ್ಷ್ಮೀ ಗಾಯತ್ರಿ ಮಹಾಶನೈಶ್ಚರ ಮಹಾ ಮೃತ್ಯುಂಜಯ ಹೋಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ಮೊದಲಾದ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಲೋಕ ಕಲ್ಯಾಣಾರ್ಥ ನೆರವೇರಿಸಲಾಗಿದೆ ಎಂದರು.
ಲಕ್ಷ್ಮೀ ವೆಂಕಟರಮಣ, ಶ್ರೀ ಶನೈಶ್ಚರ ದೇವರ ಪ್ರತಿಮೆಗಳನ್ನು ಪುಷ್ಪಾದಿಗಳಿಂದ ಅಲಂಕರಿಸಲಾಗಿತ್ತು. ಸೇವಾ ಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶಶಿಧರ್, ಭಗವತಿ, ಆಶ್ವತ್ಥನಾರಾಯಣ, ವಿಷ್ಣು, ಜಯಂತ್ ಶ್ರೀ ವತ್ಸ, ಅನಿರುದ್ಧ ಶಾಸ್ತ್ರಿ ಇತರರಿದ್ದರು.