ಬಳ್ಳಾರಿಯ ಸೊಂತ ಲಿಂಗಣ್ಣ ಕಾಲನಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಶಾಸಕ ನಾರಾಭರತರೆಡ್ಡಿ ಚಾಲನೆ ನೀಡಿದರು. ಮೇಯರ್ ಪಿ.ಗಾದೆಪ್ಪ, ಪಾಲಿಕೆ ಸದಸ್ಯರಾದ ಹನುಮಂತಪ್ಪ, ನೂರ್ ಮೊಹಮ್ಮದ್, ಕುಬೇರ, ಮುಖಂಡರಾದ ಬಜ್ಜಪ್ಪ, ದುರ್ಗಾ ಮೋಹನ್, ಅಂಬರೀಶ್ ಇತರರಿದ್ದರು.
- ರಸ್ತೆಗಳು ಅಭಿವೃದ್ಧಿ ಆಗಲೇ ಬೇಕು
ಬಳ್ಳಾರಿ : ಕೆಲ ಕಾರಣಗಳಿಂದ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಮುಂದೂಡಲ್ಪಟ್ಟಿದ್ದು, ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು. ಇಲ್ಲಿನ ಸೊಂತ ಲಿಂಗಣ್ಣ ಕಾಲನಿಯಲ್ಲಿ ಆಯೋಜಿಸಿದ್ದ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸದ್ಯ, ಯಾರೇ ಅಡ್ಡ ಬಂದರೂ ಪುತ್ಥಳಿಯ ಅನಾವರಣ ಕಾರ್ಯಕ್ರಮ ನಿಲ್ಲುವುದಿಲ್ಲ, ಈ ಹಿಂದೆ ಅಂದುಕೊಂಡದ್ದಕ್ಕಿಂತ ಅದ್ಧೂರಿಯಾಗಿ ಏರ್ಪಡಿಸಲಾಗುವುದು ಎಂದರು.
ರಸ್ತೆ ಸೇರಿದಂತೆ ಯಾವುದೇ ರೀತಿಯ ಅಭಿವೃದ್ಧಿ ಮಾಡುವಾಗ ಮರ ಸೇರಿದಂತೆ ನಾನಾ ಅಡೆತಡೆಗಳನ್ನು ತೆರವು ಮಾಡುವುದು ಸಹಜ, ಮರಗಳ ತೆರವನ್ನು ಪ್ರಶ್ನಿಸುವವರು ಯಾರೂ ಒಂದು ಮರ ನೆಡುವುದಿಲ್ಲ, ಹೆಸರಿಗೆ ಪರಿಸರ ಪ್ರೇಮಿ ಎಂಬುದಾಗಿ ಹೇಳಿಕೊಳ್ಳುತ್ತಾರೆ. ನಗರವನ್ನು ಪ್ರವೇಶಿಸುವ ರಸ್ತೆಗಳು ಅಭಿವೃದ್ಧಿ ಆಗಲೇ ಬೇಕು, ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತ ಆಗುತ್ತದೆ ಎಂದರು. ನನ್ನ ಮೇಲಿನ ಅಭಿಮಾನಕ್ಕೆ ನನ್ನ ಸಹದ್ಯೋಗಿ ಶಾಸಕರು ನನಗೆ ಸಚಿವ ಸ್ಥಾನ ಸಿಗಲಿ ಎಂದಿದ್ದಾರೆ, ಅದು ಅವರ ಪ್ರೀತಿ ಅಭಿಮಾನ. ಯುವಕರ ಕೋಟಾದಡಿ ಅವಕಾಶ ಸಿಗುವುದಾದರೆ ಶಾಸಕರಾದ ಬಸವರಾಜ ಶಿವಗಂಗಾ, ರವಿ ಗಣಿಗ ಅವರಿಗೆ ಅವಕಾಶ ಸಿಗಲಿ ಎಂದರು.