ಕಂಪ್ಲಿಯಲ್ಲಿ ಅಧಿಕಮಾಸ ನಿಮಿತ್ತ ಅಮೃತಶಿಲಾ ಶ್ರೀ ರಾಮಚಂದ್ರ, ಸೀತೆ, ಲಕ್ಷ್ಮಣ, ಆಂಜನೇಯ ಪ್ರತಿಮೆಗಳ ಮೆರವಣಿಗೆ ನಡೆಯಿತು. ಪ್ರಮುಖರಾದ ಅರ್ಚಕ ಜೋಯಿಸ್ ರಾಮಾಚಾರ್, ದಿಗ್ಗಾವಿ ವೇಣುಗೋಪಾಲ, ರಮೇಶ ಬಬಲೇಶ್ವರ, ಕಾಕುಬಾಳ ಶ್ರೀಕಾಂತಾಚಾರ್ ಇತರರಿದ್ದರು.
- ಅವಭೃತಸ್ನಾನ
- ಪ್ರತಿಮೆಗಳ
- ಮೆರವಣಿಗೆ
ಕಂಪ್ಲಿ: ಅಧಿಕಮಾಸವನ್ನು ಲೌಕಿಕ ಚಟುವಟಿಕೆಗಳಿಗೆ ಬಳಸುವ ಬದಲಿಗೆ ಆಧ್ಯಾತ್ಮ ಸಾಧನೆಗೆ ಬಳಸಿಕೊಳ್ಳಬೇಕಿದೆ ಎಂದು ಗೋರೆಬಾಳದ ಪಂಡಿತ್ ವಾಗೀಶಾಚಾರ್ ಹೇಳಿದರು.
ಇಲ್ಲಿನ ಬ್ರಾಹ್ಮಣ ಬೀದಿಯಲ್ಲಿನ ಅಮೃತಶಿಲಾ ಶ್ರೀ ರಾಮಚಂದ್ರ ದೇವಸ್ಥಾನದಲ್ಲಿ ಅಧಿಕಮಾಸ ನಿಮಿತ್ತ ಭಾನುವಾರ ಅಪೂಪ(ಅತಿರಸ) ಸಮರ್ಪಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಅಧಿಕಮಾಸದಲ್ಲಿ ಭಗವಾನ್ ವಿಷ್ಣುವಿನ ಆರಾಧನೆ, ಧ್ಯಾನ, ದಾನ-ಧರ್ಮ, ಜಪ ಮಾಡುವುದರಿಂದ ಅನಂತ ಪುಣ್ಯ ಲಭಿಸುತ್ತದೆ ಎಂದರು.
ಶ್ರೀರಾಮದೇವರಿಗೆ ಅವಭೃತಸ್ನಾನ, ಪ್ರತಿಮೆಗಳ ಮೆರವಣಿಗೆ, ವಿಷ್ಣು ಸಹಸ್ರನಾಮ ಪಠಣ ಸಹಿತ ಅಪೂಪ ಸಮರ್ಪಣೆ, ಹರಿ ಕೀರ್ತನೆ, ಸುಮಂಗಳೆಯರಿಂದ 33ದಾಸರ ಕೀರ್ತನೆ ಸೇವೆ, ತೀರ್ಥಪ್ರಸಾದ, ಮಂಡಿಗೆ ನೈವೇದ್ಯ ಸಮರ್ಪಣೆ ನಡೆಯಿತು.
ಅರ್ಚಕ ಜೋಯಿಸ್ ರಾಮಾಚಾರ್, ಸದ್ಭಕ್ತರಾದ ದಿಗ್ಗಾವಿ ವೇಣುಗೋಪಾಲ, ರಮೇಶ ಬಬಲೇಶ್ವರ, ಕಾಕುಬಾಳ ಶ್ರೀಕಾಂತಾಚಾರ್, ಶಾಖಾಪುರ ವಾಸುದೇವೇಂದ್ರಾಚಾರ್, ವಿಷ್ಣುತೀರ್ಥ, ಕೆ.ಎಚ್.ಅನಿಲ್, ಜೋಯಿಸ್ ನಾಗಾರಾಜಾಚಾರ್, ಅಗಸನೂರು ನಾಗರಾಜಾಚಾರ್, ದಿಗ್ಗಾವಿ ರಾಮಕೃಷ್ಣಾಚಾರ್, ಗುರುರಾಜ ಸೇವಾ ಮಂಡಳಿ, ಮಹಿಳಾ ಭಜನೆ ಮಂಡಳಿಯವರಿದ್ದರು.