ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದ ಸಮಾಹಿಪ್ರಾ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ನಾಗರಾಜ್ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್, ಮುಖ್ಯ ಶಿಕ್ಷಕ ಕೂಬ್ಯಾನಾಯ್ಕ, ಶಿಕ್ಷಕರಾದ ಟಿ.ವೀರೇಶ್, ನಾಗರಾಜ್, ಹೋರಾಟಗಾರ ಗುಡಿಹಳ್ಳಿ ಹಾಲೇಶ್ ಇದ್ದರು. 
ಬಳ್ಳಾರಿ

ಆಹಾರ ಸಾಮಗ್ರಿಗಳನ್ನು ಮಿತವಾಗಿ ಬಳಸಿ

ಶಾಮಸುಂದರ್ ಕೊಪ್ಪಳಕರ್
ಹರಪನಹಳ್ಳಿ: ವಿದ್ಯಾರ್ಥಿಗಳಿಗೆ ಅಡುಗೆ ಮಾಡುವ ಮುನ್ನ ಅಡುಗೆ ಕೋಣೆಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಕೆ.ನಾಗರಾಜ್ ತಿಳಿಸಿದರು.
ಅರಸೀಕೆರೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಸಿಬ್ಬಂದಿಗೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.
ಆಹಾರ ಸಾಮಗ್ರಿಗಳನ್ನು ಮಿತವಾಗಿ ಬಳಸಬೇಕು. ತರಕಾರಿಗಳನ್ನು ಸ್ವಚ್ಛವಾಗಿರುವ ಮತ್ತು ಕ್ರಿಮಿ-ಕೀಟಗಳು ಬಾರದ ಜಾಗದಲ್ಲಿ ಇರಿಸಬೇಕು ಎಂದು ಸೂಚಿಸಿದರು.
ಪ್ರಭಾರ ಮುಖ್ಯಶಿಕ್ಷಕ ಎಂ.ಮಾಲತೇಶ್ ಪಾಟೀಲ್ ಮಾತನಾಡಿ. ಅಡುಗೆ ಸಿಬ್ಬಂದಿ ಅಡುಗೆ ತಯಾರಿಕೆ ಹಾಗೂ ವಿತರಣೆಯಲ್ಲಿ ಎಚ್ಚರ ವಹಿಸಬೇಕು. ದವಸ ಧಾನ್ಯ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಖಾಜಾ ಹುಸೇನ್, ನೆಲಗೊಂಡನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕೂಬ್ಯಾನಾಯ್ಕ ಇದ್ದರು.