ಬಳ್ಳಾರಿಯ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಾಡಿ ಆ್ಯಂಡ್ ಲಿಟ್‌ರೆಚರ್ ಕುರಿತ ವಿಚಾರ ಸಂಕಿರಣವನ್ನು ಸಂಸ್ಥಾಪಕಿ ಡಾ.ಅಕ್ಕೈ ಪದ್ಮಶಾಲಿ ಉದ್ಘಾಟಿಸಿದರು. ಕುಲಪತಿ ಪ್ರೊ.ಎಂ.ಮುನಿರಾಜು, ಕುಲಸಚಿವ ಪ್ರೊ.ವಿ.ಲೋಕೇಶ್ , ಪ್ರೊ. ರಾಬರ್ಟ್ ಜೋಸ್, ಡಾ. ಟಿ.ಎಚ್.ಬಸವರಾಜ್ ಇದ್ದರು.
- ಸಮಾಜದ ಪರಿವರ್ತನೆಗೆ ಮುಂದಾಗಬೇಕು
- ಸ್ವಾವಲಂಬಿ ಜೀವನ ನಡೆಸಬೇಕು
ಬಳ್ಳಾರಿ : mಸಮಾಜದಲ್ಲಿ ಮಹಿಳೆಯರಿಗಿರುವ ಹಲವು ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಬೆಂಗಳೂರಿನ ಒಂದೆಡೆ ಸಂಸ್ಥೆಯ ಸಂಸ್ಥಾಪಕಿ ಡಾ.ಅಕ್ಕೈ ಪದ್ಮಶಾಲಿ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಅಂಗ್ಲ ಅಧ್ಯಯನ ವಿಭಾಗ, ಯುಜಿ ಅಂಗ್ಲ ಶಿಕ್ಷಕರ ಸಂಘ ಹಾಗೂ ಅಂಗ್ಲ ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಬಾಡಿ ಆ್ಯಂಡ್ ಲಿಟ್‌ರೆಚರ್ ಕುರಿತು ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ದೇವದಾಸಿಯರು, ದಲಿತ ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದರು.
ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಸಮಾಜದಲ್ಲಿ ವ್ಯಕ್ತಿ ಗೌರವ, ಹಕ್ಕು ಸ್ವಾತಂತ್ರೃ ಕಾಪಾಡುವುದು ಮುಖ್ಯವಾಗಿದೆ. ಹಲವಾರು ನೈತಿಕ ವಿಚಾರಗಳ ಕುರಿತು ವಿದ್ಯಾರ್ಥಿಗಳು, ಸಂಶೋಧಕರು ಗಂಭೀರವಾಗಿ ಚಿಂತನೆ ನಡೆಸಿ, ಸಮಾಜದ ಪರಿವರ್ತನೆಗೆ ಮುಂದಾಗಬೇಕು ಎಂದರು. ನಾನಾ ಕಾಲೇಜುಗಳ ಪ್ರಾಧ್ಯಾಪಕರು ಸೇರಿದಂತೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.