ಹಗರಿಬೊಮ್ಮನಹಳ್ಳಿಯ ರಾಮನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಕೆ.ನೇಮಿರಾಜ್‌ನಾಯ್ಕ ನಾಮಫಲಕ ಅನಾವರಣಗೊಳಿಸಿದರು. ಪ್ರಮುಖರಾದ ಯಡ್ರಮ್ಮನಹಳ್ಳಿ ಮರಿಯಪ್ಪ, ಚಿಂತ್ರಪಳ್ಳಿ ರಮೇಶ, ನಾಗರಾಜ ಕಲ್ಲಳ್ಳಿ, ರಮೇಶ ಪೂಜಾರಿ, ಕೋಗಳಿ ಉಮೇಶ, ದಶಮಾಪುರ ಮರಿಯಪ್ಪ, ಅಲಬೂರು ಗಣೇಶ ಇತರರಿದ್ದರು.
ಹಗರಿಬೊಮ್ಮನಹಳ್ಳಿ: ಡಾ.ಬಾಬು ಜಗಜೀವನರಾಮ್ ಅವರು ದೇಶದ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಶಾಸಕ ನೇಮಿರಾಜ್ ನಾಯ್ಕ ಹೇಳಿದರು.
ರಾಮನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಾಜಿ ಉಪಪ್ರಾಧಾನಿ ಡಾ.ಬಾಬು ಜಗಜೀವನರಾಮ್ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಬಾಬು ಜಗಜೀವನರಾಮ್ ವೃತ್ತದ ನಾಮಫಲಕ ಅನಾವರಣಗೊಳಿಸಿ ವೃತ್ತಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಬಾಬೂಜಿ ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಿ ಎಂದರು.
ಪ್ರಮುಖರಾದ ಯಡ್ರಮ್ಮನಹಳ್ಳಿ ಮರಿಯಪ್ಪ, ಚಿಂತ್ರಪಳ್ಳಿ ರಮೇಶ, ನಾಗರಾಜ ಕಲ್ಲಳ್ಳಿ, ರಮೇಶ ಪೂಜಾರಿ, ಕೋಗಳಿ ಉಮೇಶ, ದಶಮಾಪುರ ಮರಿಯಪ್ಪ, ಆನಂದಳ್ಳಿ ಪ್ರಭಾಕರ, ಹೆಗ್ಡಾಳ್ ಪರಶುರಾಮ, ಶಿವಾನಂದ ನಗರ ಲಿಂಗರಾಜ, ಅಲಬೂರು ಗಣೇಶ, ಪಕ್ಕೀರಪ್ಪ ಕಡಲಬಾಳು, ಕೆಚ್ಚಿನಬಂಡಿ ದುರುಗಪ್ಪ ಇತರರಿದ್ದರು.