ಅನಿರೀಕ್ಷಿತ ದಾಳಿ, ಮೊಬೈಲ್ ಚಾರ್ಜ್‌ರ್ ಪತ್ತೆ
ಬಳ್ಳಾರಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು ನಡೆಸಿದ ಅನಿರೀಕ್ಷಿತ ದಾಳಿಯಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ದಾಳಿಯಲ್ಲಿ ನಾಲ್ಕು ಕೀ ಪ್ಯಾಡ್ ಮೊಬೈಲ್, ಮೂರು ಯುಎಸ್‌ಬಿ ಕನೆಕ್ಟರ್ ಕೇಬಲ್, ತಲಾ ಒಂದು ಚಾರ್ಜರ್, ಇಯರ್ ಪೋನ್ ಪತ್ತೆಯಾಗಿವೆ. ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನದಡಿ ಬುಧವಾರ ತಡರಾತ್ರಿ ಜೈಲು ಅಧೀಕ್ಷಕಿ ಲತಾ ನೇತೃತ್ವದಲ್ಲಿ ಜೈಲರ್ , ಸಹಾಯಕ ಜೈಲರ್, ಸಿಬ್ಬಂದಿ ತಂಡವು ದಾಳಿ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಿದವರು ಹಾಗೂ ಉಪಯೋಗಿಸಿದವರ ಮೇಲೆ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜೈಲು ಅಧೀಕ್ಷಕಿ ಲತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.