ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ನೂತನವಾಗಿ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶಿತಗೊಂಡ ಎಸ್.ಆರ್.ಶರಣ ಕುಮಾರ್ ಅವರಿಗೆ ಕುಲಸಚಿವ ವಿ.ಲೋಕೇಶ್ ಆದೇಶ ಪತ್ರ ವಿತರಿಸಿದರು. 
ಬಳ್ಳಾರಿ

ವಿವಿಯ ಸಿಂಡಿಕೇಟ್‌ಗೆ ಇಬ್ಬರು ನಾಮನಿರ್ದೇಶನ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ತೆರವಾಗಿದ್ದ ಸ್ಥಾನಕ್ಕೆ ಇಬ್ಬರು ನೇಮಕ
ಬಳ್ಳಾರಿ : ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಟಿಕೇಟ್ ಸದಸ್ಯರನ್ನಾಗಿ ಬೆಂಗಳೂರಿನ ಶಶಿಧರ್ ಬಿ.ಎನ್ ಹಾಗೂ ಬಳ್ಳಾರಿಯ ಎಸ್.ಆರ್.ಶರಣ ಕುಮಾರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಕುಲಧಿಪತಿಗಳೂ ಆದ ರಾಜ್ಯಪಾಲರು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ 2000ರ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದೆ. ಜು.3ರಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಈ ನೇಮಕಾತಿ ಇರಲಿದೆ. ಸಿಂಡಿಕೇಟ್‌ನ ಇಬ್ಬರ ಸದಸ್ಯರ ಅವಧಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಈ ಇಬ್ಬರನ್ನು ನೇಮಕ ಮಾಡಲಾಗಿದೆ.
===