ಕಂಪ್ಲಿಯಲ್ಲಿ ಬಾಲಕಾರ್ಮಿಕ ನಿಷೇಧ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಬಾಲ ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಮಾತನಾಡಿದರು. ಅಧಿಕಾರಿಗಳಾದ ಜಿ.ಪಂಪಾಪತಿ, ಶಿವಶಂಕರ ತಳವಾರ, ಪಿಎಸ್‌ಐ ಅವಿನಾಶ್ ಕಾಂಬ್ಳೆ ಇದ್ದರು. 
ಬಳ್ಳಾರಿ

ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

ಶಾಮಸುಂದರ್ ಕೊಪ್ಪಳಕರ್
ಕಂಪ್ಲಿ : ಪಟ್ಟಣದ 20ಕ್ಕೂ ಅಧಿಕ ಅಂಗಡಿ, ಗ್ಯಾರೇಜ್, ಉದ್ದಿಮೆಗಳ ಮೇಲೆ ಗುರುವಾರ ದಿಢೀರ್ ದಾಳಿ ಮಾಡಿ ಇಬ್ಬರು ಬಾಲ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ ಎಂದು ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಎ.ಮೌನೇಶ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಟಾಸ್ಕ್‌ಫೋರ್ಸ್ ಸಭೆ ಬಳಿಕ ದಾಳಿ ನಡೆಸಿದ್ದು, ಇಬ್ಬರು ಬಾಲ ಕಾರ್ಮಿಕರನ್ನು ಪತ್ತೆ ಮಾಡಿ ಶಾಲೆಗೆ ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಲಾ ದೃಢೀಕರಣ ಪತ್ರ ಪಡೆದು ಬಾಲ ಕಾರ್ಮಿಕರನ್ನಾಗಿ ಬಳಸಿಕೊಂಡ ಉದ್ದಿಮೆಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಬಾಲ ಕಾರ್ಮಿಕ ಪದ್ಧತಿ ತೊಲಗಿಸಲು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮಾಸಿಕ 20 ತಪಾಸಣೆ, ಇತರ ಇಲಾಖೆಗಳಿಗೆ ಮಾಸಿಕ ಐದು ತಪಾಸಣೆ ಗುರಿ ನೀಡಲಾಗಿದೆ. ಕಳೆದ ತಿಂಗಳು ಮಕ್ಕಳ ಸಹಾಯವಾಣಿಗೆ ಎರಡು ದೂರು ಬಂದಿದ್ದು ಒಂದು ಮಗುವನ್ನು ರಕ್ಷಿಸಲಾಗಿದೆ. ಗ್ರಾಮ, ಹೋಬಳಿಗಳಲ್ಲಿ ಉದ್ದಿಮೆ ಜತೆಗೆ ಬಾರ್ ರೆಸ್ಟೋರೆಂಟ್ ಮೇಲೆಯೂ ದಾಳಿ ಮಾಡಲಿದ್ದೇವೆ ಎಂದರು.
ಶಿರಸ್ತೇದಾರ್ ಜಿ.ಪಂಪಾಪತಿ, ಪಿಎಸ್‌ಐ ಅವಿನಾಶ ಕಾಂಬ್ಳೆ, ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಪುರಸಭೆ ಕಂದಾಯ ಅಧಿಕಾರಿ ಪ್ರಶಾಂತ ಚಿತ್ರಗಾರ, ಇಸಿಒ ಟಿ.ಎಂ.ಬಸವರಾಜ, ಮಹಿಳಾ ಮೇಲ್ವಿಚಾರಕಿ ಲತೀಫಾ ಬೇಗಂ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಂಯೋಜಕ ಜಿ.ಎಚ್.ಪ್ರಶಾಂತ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ಚೈಲ್ಡ್ ಲೈನ್, ರೀಚ್ ಸಂಸ್ಥೆಗಳ ಸಂಯೋಜಕರು ಇತರರಿದ್ದರು.