ಕಾನಹೊಸಹಳ್ಳಿ ಸಮೀಪದ ಪಾಲಯ್ಯನಕೋಟೆ ಜಾಕ್ವಲ್‌ನಿಂದ ತಾಲೂಕಿನ 58 ಕೆರೆಗಳಿಗೆ ನೀರುವ ತುಂಬಿಸುವ ಪಂಪ್‌ಹೌಸ್‌ಗೆ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಯೋಜನೆಯ ಎಇಇ ರಾಘವೇಂದ್ರ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಬಣವಿಕಲ್ಲು ಎರ‌್ರಿಸ್ವಾಮಿ, ಕಾವಲಿ ಶಿವಪ್ಪನಾಯಕ, ಪಾಲಯ್ಯನಕೋಟೆ ಕಲ್ಲೇಶ್ ಇದ್ದರು. 
ಬಳ್ಳಾರಿ

ಬರದ ನಾಡಿಗೆ ಹರಿದು ಬಂದಾ ತುಂಗಭದ್ರಾ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿಕೆ
  • ಕೆರೆಗಳಿಗೆ ನೀರುವ ತುಂಬಿಸುವ ಪಂಪ್‌ಹೌಸ್‌ಗೆ ಚಾಲನೆ

ಕಾನಹೊಸಹಳ್ಳಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರ ಆವರಿಸಿರುವ ಸಂದರ್ಭದಲ್ಲಿ ಸದಾ ಬರಪೀಡಿತ ಕೂಡ್ಲಿಗಿ ತಾಲೂಕಿನ 58 ಕೆರೆಗಳಿಗೆ ತುಂಗಭದ್ರಾ ನದಿಯ ನೀರು ಹರಿಯುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.

ಪಾಲಯ್ಯನಕೋಟೆ ಜಾಕ್ವಲ್‌ನಿಂದ ತಾಲೂಕಿನ 58 ಕೆರೆಗಳಿಗೆ ನೀರುವ ತುಂಬಿಸುವ ಪಂಪ್‌ಹೌಸ್‌ಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ರೈತರ ಹಲವು ದಶಕ ಕನಸಿನ ಯೋಜನೆ ಪೂರ್ಣಗೊಂಡು ನೀರು ಹರಿಸಲಾಗುತ್ತಿದೆ. ಒಟ್ಟು 74 ಕೆರೆಗಳಿಗೆ 2 ಹಂತದಲ್ಲಿ ಲಭ್ಯವಿರುವ ನೀರನ್ನು ಕೆರೆಗಳಿಗೆ ತುಂಬಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದರು.
ಯೋಜನೆಯ ಎಇಇ ರಾಘವೇಂದ್ರ, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಪ್ರಮುಖರಾದ ಬಣವಿಕಲ್ಲು ಎರ‌್ರಿಸ್ವಾಮಿ, ಕಾವಲಿ ಶಿವಪ್ಪನಾಯಕ, ಪಾಲಯ್ಯನಕೋಟೆ ಕಲ್ಲೇಶ್, ನಿಂಬಳಗೇರೆ ಕೋಟ್ರೇಶ್, ಬಸವರಾಜ್, ಮಲ್ಲೇಶ್, ರಾಮಪ್ಪ, ಬಸಪ್ಪ, ಬಸವರಾಜಪ್ಪ. ಡಾ.ಓಂಕಾರಪ್ಪ ಇತರರಿದ್ದರು.