ಹರಪನಹಳ್ಳಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಶ್ರದ್ಧಾಜಲಿ ಸಲ್ಲಿಸಲಾಯಿತು. ವಾಲ್ಮೀಕಿ ಸಮಾಜದ ತಾಲೂಕು ಘಟಕದ ಮಾಜಿ ಅಧ್ಯಕ್ಷರಾದ ಕೆ.ಉಚ್ಚಂಗೆಪ್ಪ, ಎಚ್.ಕೆ.ಮಂಜುನಾಥ, ನಿವೃತ್ತ ಶಿಕ್ಷಕ ತೆಲಿಗಿ ಅಂಜಿನಪ್ಪ, ಪ್ರಮುಖರಾದ ಬೇಲೂರು ಸಿದ್ದೇಶ್, ಎಸ್.ಶಿವಪ್ಪ, ಕಡಕೋಳ್, ನೂರುದ್ದೀನ್, ಸತ್ತಾರ್ ಸಾಹೇಬ್ ಇತರರಿದ್ದರು.  
ಬಳ್ಳಾರಿ

ಸೋಲಿಲ್ಲದ ಸರದಾರ ಶಾಮನೂರು

ಪ್ರಮುಖ ಮುಖ್ಯಾಂಶಗಳು

  • ಶ್ರದ್ಧಾಂಜಲಿ

ಸೋಲಿಲ್ಲದ ಸರದಾರ ಶಾಮನೂರು

ಹರಪನಹಳ್ಳಿಯಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ

ಹರಪನಹಳ್ಳಿ: ಶೈಕ್ಷಣಿಕ ಕ್ರಾಂತಿಯ ಮೂಲಕ ದಾವಣಗೆರೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರಮುಖ ಪಾತ್ರ ವಹಿಸಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ವಾಲ್ಮೀಕಿ ಸಮಾಜ ಹಾಗೂ ಸಾಧು ಲಿಂಗಾಯತ ಸಮಾಜದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಮನೂರು ಶಿವಶಂಕರಪ್ಪ ಅವರು ರಾಜಕಾರಣದಲ್ಲಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಹೊಂದಿದ್ದರು. ಹಿಂದುಳಿದ ದಾವಣಗೆರೆಯನ್ನು ಎರಡನೇ ಬೆಂಗಳೂರು ಎನ್ನುವ ಮಟ್ಟಕ್ಕೆ ಬೆಳೆಸಿದರು. ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಅಸಂಖ್ಯಾತ ವಿದ್ಯಾರ್ಥಿಗಳ ಬದುಕಿಗೆ ದಾರಿ ದೀಪವಾಗಿದ್ದರು. ಅನೇಕ ಉದ್ಯಮಗಳನ್ನು ಸ್ಥಾಪಿಸಿ ಯುವ ಜನತೆಗೆ ಮಾದರಿಯಾಗಿದ್ದರು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಾತನಾಡಿ, ಶಿವಶಂಕರಪ್ಪ ಅವರು ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಸರಳತೆಯಿಂದ ಬದುಕಿದರು. ರಾಜಕಾರಣದ ಜತೆಗೆ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಅಲ್ಲದೆ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ ಲಿಂಗಾಯತ ಸಮುದಾಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಬಂದೋಳ್ ಮಂಜುನಾಥ, ಮುಖಂಡ ಮುತಿಗಿ ಜಂಬಣ್ಣ, ಪ್ರಮುಖರಾದ ಬಾವಿಕಟ್ಟಿ ಭರ್ಮಪ್ಪ, ಮಂಡಕ್ಕಿ ಸುರೇಶ್, ಗುಂಡಿ ಮಂಜುನಾಥ, ಪಟ್ನಾಮದ್ ಪರಶುರಾಮ್, ಗಿಟ್ಟಳ್ಳಿ ನಾಗರಾಜ, ಮೈದೂರು ಮಾರುತಿ, ಕವಸರ ವಿಜಯಕುಮಾರ್, ರಾಮದುರ್ಗ ವಾಗೀಶ್, ಮ್ಯಾಕಿ ದುರುಗಪ್ಪ, ದ್ಯಾಮಜ್ಜಿ ದಂಡ್ಯೆಪ್ಪ ಇತರರಿದ್ದರು.