ಹಗರಿಬೊಮ್ಮನಹಳ್ಳಿ ಪಶು ಸಂಗೋಪನೆ ಇಲಾಖೆ ಕಚೇರಿ ಆವರಣದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ತಡೆಗಟ್ಟುವ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಕೆ.ನೇಮಿರಾಜ್‌ನಾಯ್ಕ ಚಾಲನೆ ನೀಡಿದರು. ಜೆಡಿಎಸ್ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪ್ರಮುಖರಾದ ಈ.ಕೆ.ಮೂರ್ತಿ, ಚಿತ್ತವಾಡಗಿ ಪ್ರಕಾಶ್, ಗೊಲ್ಲರ ಜಯಪ್ಪ ಇತರರಿದ್ದರು. 
ಬಳ್ಳಾರಿ

ಜಾನುವಾರುಗಳನ್ನು ಮಕ್ಕಳಂತೆ ಜೋಪಾನ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಜಾನುವಾರು
  • ಮಕ್ಕಳಂತೆ ಜೋಪಾನ ಮಾಡಿ
  • ಕಾಲುಬಾಯಿ ಲಸಿಕೆ

ಜಾನುವಾರುಗಳನ್ನು ಮಕ್ಕಳಂತೆ ಜೋಪಾನ ಮಾಡಿ

ಹಗರಿಬೊಮ್ಮನಹಳ್ಳಿ: ಜಾನುವಾರುಗಳಿಗೆ ಲಸಿಕೆ ಹಾಕಲು ರೈತರು ಸಹಕರಿಸಬೇಕೆಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.
ಪಟ್ಟಣದ ಹಳೇ ಊರಿನ ಪಶು ಸಂಗೋಪನೆ ಇಲಾಖೆ ಆಸ್ಪತ್ರೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ 8ನೇ ಸುತ್ತಿನ ಕಾಲುಬಾಯಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯರು ನೋವು, ಗಾಯ ಹೇಳಿಕೊಂಡು ಔಷಧಿ ಪಡೆಯಬಹುದು. ಆದರೆ, ಮೂಕ ಪ್ರಾಣಿಗಳು ವೇದನೆ ಅನುಭವಿಸುತ್ತವೆ.
ರೈತರು ಜಾನುವಾರುಗಳನ್ನು ಮಕ್ಕಳಂತೆ ಜೋಪಾನ ಮಾಡಬೇಕು. ಆಗಾಗ ಆರೋಗ್ಯದ ಬಗ್ಗೆ ಗಮನಿಸುತ್ತಾ, ರೋಗ ಬಾರದಂತೆ ತಡೆಗಟ್ಟುವ ಲಸಿಕೆ ಹಾಕಿಸಬೇಕು. ಸಿಡಿಲು ಮತ್ತು ವಿದ್ಯುತ್ ಅವಘಡದಿಂದ ಸಾಯುವ ಜಾನುವಾರುಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದರು.
ಪಶು ವೈದ್ಯಾಧಿಕಾರಿ ಡಾ.ಸೂರಪ್ಪ ಮಾತನಾಡಿ, ಪಶು ಇಲಾಖೆಯಿಂದ ಪ್ರತಿ ವರ್ಷ 6 ತಿಂಗಳಿಗೊಮ್ಮೆ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ನೀಡಲಾಗುವುದು. ಮಳೆಗಾಲ ಮತ್ತು ಬೇಸಿಗೆ ಸಮಯದಲ್ಲಿ ಕಾಲು ಬಾಯಿ ರೋಗ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ.
ಲಸಿಕೆಯಿಂದ ಇತ್ತೀಚಿಗೆ ರೋಗ ನಿಯಂತ್ರಣವಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ನಿವೃತ್ತ ಸೈನಿಕ ರಾಮರೆಡ್ಡಿ, ಪ್ರಮುಖರಾದ ಈ.ಕೆ.ಮೂರ್ತಿ, ಚಿತ್ತವಾಡಗಿ ಪ್ರಕಾಶ್, ಗೊಲ್ಲರ ಜಯಪ್ಪ, ಅಂಬಳಿ ರವೀಂದ್ರ ಗೌಡ, ರುದ್ರೇಶ್, ಮೈನಹಳ್ಳಿ ಸೋಮಶೇಖರ್, ಟಿ.ಕೊಟ್ರೇಶ್, ರೆಡ್ಡಿ ಕೊಟ್ರೇಶ್, ಬಾಬು ಫಕೃದ್ದೀನ್, ಬುಡೇನ್‌ಸಾಬ್, ಗೋಮಾತಾ ಕೊಟ್ರೇಶ, ಬ್ಯಾಟಿ ನಾಗರಾಜ್, ವೀರೇಶ್ ಇತರರಿದ್ದರು.