ಸಂಡೂರಿನಲ್ಲಿ ಕಸಾಪ ದತ್ತಿ ಉಪನ್ಯಾಸಗಳ ಸರಣಿ ಉದ್ಘಾಟನಾ ಸಮಾರಂಭಕ್ಕೆ ಉಪನ್ಯಾಸಕ ಡಾ. ಯು.ಶ್ರೀನಿವಾಸ ಮೂರ್ತಿ ಚಾಲನೆ ನಿಡಿದರು. ಬಿಇಒ ಡಾ. ಐ.ಆರ್.ಅಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ, ದತ್ತಿ ದಾನಿ ಎಡಿಯೂರು ವಸಂತಮ್ಮ, ಮುಖ್ಯಶಿಕ್ಷಕಿ ಜ್ಯೋತಿ ಬಾಯಿ ಇದ್ದರು.
- ಉಪನ್ಯಾಸಕ ಡಾ.ಯು.ಶ್ರೀನಿವಾಸ ಮೂರ್ತಿ ಅಭಿಮತ
- ಸಂಡೂರು ದತ್ತಿ ಉಪನ್ಯಾಸ ಮಾಲಿಕೆ
ಸಂಡೂರು: ಆದಿಕವಿ ಪಂಪನಿಂದ ಹಿಡಿದು ಇಂದಿನ ನವ್ಯ ಕವಿಗಳವರಗೆ ಕನ್ನಡ ಸಾಹಿತ್ಯ ವೈವಿಧ್ಯಮಯ ಸ್ಥಿತ್ಯಂತರಗಳನ್ನು ಕಂಡಿದೆ ಎಂದು ಉಪನ್ಯಾಸಕ ಡಾ. ಯು.ಶ್ರೀನಿವಾಸ ಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಕಸಾಪ ತಾಲೂಕು ಘಟಕದಿಂದ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ‘ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ’ ಕುರಿತು ಉಪನ್ಯಾಸ ನೀಡಿದರು. ಯುಗ ಧರ್ಮಕ್ಕೆ ಅನುಗುಣವಾಗಿ ಸಾಹಿತ್ಯದ ಮೌಲ್ಯಗಳಿಗೆ ಹಾನಿಯಾಗದಂತೆ ಬದಲಾವಣೆಯ ಹಾದಿ ಕಂಡುಬರುತ್ತದೆ ಎಂದರು.
ಕುಮಾರವ್ಯಾಸ ಭಾರತದಲ್ಲಿ ಅರಸರನ್ನು ಲೆಕ್ಕಿಸದೆ ಬರೆದದ್ದು ಕಾಣಬಹುದು. ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ, ಶಿವರಾಮ ಕಾರಂತರ ವೈಜ್ಞಾನಿಕ ಮನೋಭಾವ, ಬೇಂದ್ರೆಯವರ ಹೊಸ ರೀತಿಯ ಆಧ್ಯಾತ್ಮಿಕ ಚಿಂತನೆಗಳು ಕನ್ನಡ ಸಾಹಿತ್ಯ ವಿಸ್ತಾರ ಹೆಚ್ಚಿಸಿವೆ. ಇವು ಕನ್ನಡ ಜನರ ಚಿಂತನಾ ಲಹರಿ ಹೆಚ್ಚಿಸಿದ್ದು ಹೆಗ್ಗಳಿಕೆ ಎಂದರು.
ಮುಖ್ಯಶಿಕ್ಷಕಿ ಜ್ಯೋತಿಬಾಯಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಡಾ.ಐ.ಆರ್.ಅಕ್ಕಿ, ಕಸಾಪ ತಾಲೂಕು ಅಧ್ಯಕ್ಷ ಬಿ.ನಾಗನಗೌಡ, ಮಾಜಿ ಅಧ್ಯಕ್ಷ ಬಸವರಾಜ್ ಮಸೂತಿ, ಪ್ರಮುಖರಾದ ಸಿ.ಎಂ.ಶಿಗ್ಗಾವಿ, ಜಿ.ವೀರೇಶ್, ದತ್ತಿ ದಾನಿ ಎಲ್.ವಸಂತಮ್ಮ, ಎಚ್.ಎನ್.ಬೋಸ್ಲೆ, ಎಂ.ಟಿ.ರಾಠೋಡ್, ಶಬ್ಬೀರ್, ಚಂದ್ರಶೇಖರ್, ಎಸ್.ಡಿ.ಪ್ರೇಮಲೀಲಾ, ಅಕ್ಕ ನಾಗಮ್ಮ, ಎ.ಸಿದ್ದೇಶ್ವರಿ, ಬಸವರಾಜ ಇತರರಿದ್ದರು.