ಮುಂಗಾರು ಮಳೆ ಆರಂಭಕ್ಕೆ ಪೂರ್ವಭಾವಿಯಾಗಿ ಎಮ್ಮಿಗನೂರಿನಲ್ಲಿ ಆಯೋಜಿಸಿದ್ದ ನರೇಗಾ ಕೂಲಿಕಾರ್ಮಿಕರ ಮುಂಜಾಗ್ರತಾ ಸಭೆಯಲ್ಲಿ ತಾಪಂ ಐಇಸಿ ಸಂಯೋಜಕ ಹನುಮೇಶ್ ಮಾತನಾಡಿದರು. ಪಿಡಿಒ ಹಾಲಹರವಿ ಶೇಷಗಿರಿ, ಗ್ರಾಪಂ ಸಿಬ್ಬಂದಿ ವೈ.ರಾಜಶೇಖರರೆಡ್ಡಿ, ಸಾಯಿಬಣ್ಣ ಇತರರಿದ್ದರು. 
ಬಳ್ಳಾರಿ

ಕಚ್ಚಾ ಮನೆಯಲ್ಲಿ ವಾಸಿಸುವವರು ಎಚ್ಚರದಿಂದಿರಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಐಇಸಿ ಸಂಯೋಜಕ ಹನುಮೇಶ್ ಸಲಹೆ
  • ಕಂಪ್ಲಿ ಕೂಲಿಕಾರರಿಗೆ ಮುಂಜಾಗ್ರತಾ ಸಭೆ
ಕಂಪ್ಲಿ: ಮುಂಗಾರು ಆರಂಭವಾಗಲಿರುವುದರಿಂದ ಕಚ್ಚಾ ಮನೆಗಳಲ್ಲಿ ವಾಸಿಸುವವರು ಎಚ್ಚರದಿಂದ ಇರಬೇಕು ಎಂದು ತಾಪಂ ಐಇಸಿ ಸಂಯೋಜಕ ಹನುಮೇಶ್ ಹೇಳಿದರು.
ಮುಂಗಾರು ಮಳೆ ಆರಂಭ ಹಿನ್ನೆಲೆಯಲ್ಲಿ ಎಮ್ಮಿಗನೂರು ಗ್ರಾಮದ ಸಕಿಪ್ರಾ ಶಾಲೆ ಬಳಿ ನರೇಗಾ ಕೂಲಿಕಾರರಿಗೆ ಆಯೋಜಿಸಿದ್ದ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದರು. ಶಿಥಿಲ, ಕಚ್ಚಾ ಮನೆಗಳು ಮಳೆಯಿಂದ ಕುಸಿವ ಸಂಭವ ಇರುವುದರಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಗುಡುಗು, ಸಿಡಿಲಿನೊಂದಿಗೆ ಮಳೆ ಬೀಳುವಾಗ ಹೊರಗಡೆ ಓಡಾಡುವುದು, ಮರಗಳಡಿ ಇರುವುದು ಸುರಕ್ಷಿತವಲ್ಲ. ನದಿ, ಹಳ್ಳಕೊಳ್ಳಗಳ ಬಳಿ ವಾಸಿಸುವ ಜನತೆ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ನರೇಗಾ ಕೂಲಿಕಾರರು ಅಳತೆಗೆ ತಕ್ಕಂತೆ ಕೆಲಸ ಮಾಡಬೇಕು. ಎರಡು ಬಾರಿ ಆ್ಯಪ್ ಮೂಲಕ ಹಾಜರಾತಿ ನೀಡಬೇಕು. ಕೆಲಸಕ್ಕೆ ಗೈರಾಗದಂತೆ ಕಾಯಕ ಬಂಧುಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೋಜಗಾರ್ ದಿನ ಆಚರಿಸಲಾಯಿತು. ಪಿಡಿಒ ಹಾಲಹರವಿ ಶೇಷಗಿರಿ, ಗಣಕಯಂತ್ರ ನಿರ್ವಾಹಕ ವೈ.ರಾಜಶೇಖರರೆಡ್ಡಿ, ಕರವಸೂಲಿಗಾರ ಸಾಯಿಬಣ್ಣ, ಕಾಯಕ ಮಿತ್ರರಾದ ಶಿಲ್ಪಾ, ಕಾಳಮ್ಮ, ನರೇಗಾ ಕೂಲಿಕಾರರು ಇದ್ದರು.