ತೋರಣಗಲ್‌ನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆ ಸದಸ್ಯರು ಜಿಲ್ಲಾ ವೈದ್ಯಾಧಿಕಾರಿ ಸುನಿತಾಗೆ ಮನವಿ ಸಲ್ಲಿಸಿದರು. ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಂಚಾಲಕ ವಿ.ದೇವಣ್ಣ, ಹಾಲೇಶ, ಕೆ.ಸಿದ್ದಪ್ಪ, ಮಲ್ಲಯ್ಯ, ಮಾಲನ್ ಬೀ, ಹೊನ್ನೂರಮ್ಮ, ಉಪ್ಪಾರ್ ಹುಲಿಗಮ್ಮ ಇತರರಿದ್ದರು. 
ಬಳ್ಳಾರಿ

ತೋರಗಣಗಲ್ ಆಸ್ಪತ್ರೆ ಮೇಲ್ದರ್ಜೆಗೇರಿಸಿ

ಸಂಡೂರು: ತಾಲೂಕಿನ ತೋರಣಗಲ್ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಒತ್ತಾಯಿಸಿ ಡಿವೈಎಫ್‌ಐ, ಸಿಪಿಎಂ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾ ವೈದ್ಯಾಧಿಕಾರಿ ಸುನಿತಾಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ ಮಾತನಾಡಿ, ತೋರಣಗಲ್‌ನ ಸಮುದಾಯ ಆರೋಗ್ಯ ಕೇಂದ್ರವು ಸುತ್ತಲಿನ 42ಹಳ್ಳಿಗಳಿಂದ ಕೂಡಿದೆ. ಕೈಗಾರಿಕಾ ಪ್ರದೇಶವನ್ನೂ ಹೊಂದಿದೆ. ಹೋಬಳಿ ಮಟ್ಟದಲ್ಲಿ ಒಟ್ಟು ಒಂಬತ್ತು ಗ್ರಾಪಂ, ಒಂದು ಪುರಸಭೆ ವ್ಯಾಪ್ತಿಯ ಪ್ರದೇಶಗಳು ಇದಕ್ಕೆ ಒಳಪಡಲಿವೆ. ಬೃಹತ್ ವ್ಯಾಪ್ತಿ ಪ್ರದೇಶದ ಜನರಿಗೆ ಆರೋಗ್ಯ ಸೇವೆ ನೀಡಬೇಕಿರುವುದರಿಂದ ಈ ಸಮುದಾಯ ಆರೋಗ್ಯ ಕೇಂದ್ರವನ್ನು 200 ಬೆಡ್‌ಗಳಿಗೆ ಮೇಲ್ದರ್ಜೆಗಿರಿಸಬೇಕು. ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಬೇಕು. ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹ ಸಂಖ್ಯೆ ಹೆಚ್ಚಳ ಜತೆಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿದರು.
ವೈದ್ಯೆ ಸುನಿತಾ, ಕ.ಪ್ರಾಂ.ರೈ.ಸಂ. ತಾಲೂಕು ಕಾರ್ಯದರ್ಶಿ ಪಂಪನಗೌಡ, ಕರಾದೇಮವಿಸಂ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಇತರರಿದ್ದರು.