ನಾರಾಯಣ ಸ್ವಾಮಿ 
ಬಳ್ಳಾರಿ

ಕಾಂಗ್ರೆಸ್‌ಗಿಂತ ಮತ್ತೋಂದು ನಾಟಕ ಕಂಪನಿ ಇದಯೇ

ಪ್ರಮುಖ ಮುಖ್ಯಾಂಶಗಳು

  • ಸಚಿವರು
  • ವಿಧಾನಪರಿಷತ್
  • ಹೊಣೆಗಾರಿಕೆ
ನಗರದಲ್ಲಿ ಸುದ್ದಿಗಾರರೊಂದಿಗೆವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್‌ಗಿಂತ ಮತ್ತೋಂದು ನಾಟಕ ಕಂಪನಿ ಇದಯೇ ?. ಡಿಸಿಎಂ ಡಿ.ಕೆ.ಶಿವಕುಮಾರ್ ಇದರ ಚೇರ್‌ಮೇನ್‌ಯಾಗಿದ್ದರೆ. ರಾಜ್ಯದಲ್ಲಿ ಗೃಹ ಸಚಿವರು ಪಾರ್ಟ್ ಟೈಂ ವರ್ಕ್ ಮಾಡುತ್ತಿದ್ದಾರೆ. ಉಳಿದಂತೆ ಸಂಪುಟದ ಸಚಿವರು ಹಾಗೂ ಶಾಸಕರು ಗೃಹ ಮಂತ್ರಿಯಾಗಿದ್ದರೆ. ಇಂತಹ ಹೀನ ಕೃತ್ಯ ಎಸಗಿರುವ ಶಾಸಕನನ್ನು ಕಾಂಗ್ರೆಸ್ ಪಕ್ಷ ನೈತಿಕ ಹೊಣೆ ಹೊತ್ತು ಪಕ್ಷದಿಂದ ವಜಾಗೊಳಿಸಬೇಕು. ಕರ್ನಾಟಕ ರಾಜ್ಯ ಗಂಧದ ನಾಡಿನಿಂದ, ಗಾಂಜಾ ಬೀಡಾಗಿ ಮಾರ್ಪಾಟ್ಟಿದೆ ಎಂದು ಕಿಡಿಕಾರಿದರು.
ಈ ಘರ್ಷಣೆಯಲ್ಲಿ ಪಿಸ್ತೂಲ್, ಗುಂಡು, ಗೊಂಡಾಗಳು, ಸತ್ತವರು ಎಲ್ಲರೂ ಕಾಂಗ್ರೆಸ್ ಪಕ್ಷದವರೆ. ಆದರೆ, ಪ್ರಕರಣ ದಾಖಲಾಗಿದ್ದು ಬಿಜೆಪಿ ನಾಯಕರ ಮೇಲೆ. ಕೆಪಿಸಿಸಿ ಸತ್ಯ ಶೋಧನಾ ಸಮಿತಿಯೂ ಸತ್ಯ ಮುಚ್ಚಿಡಿವುದಕ್ಕೆ ಬಂದಿದೆ. ಶಾಸಕರೇ ನನ್ನ ಹಿಂದೆ ಐದು ಸಾವಿರ ಜನರಿದ್ದರು. ನಾನಾ ತಾಳ್ಮೆ ಕಳೆದುಕೊಂಡಿದ್ದರೆ ಬಳ್ಳಾರಿ ಭಸ್ಮ ಆಗುತ್ತಿತ್ತು. ಆದರೆ, ಕೆಲವೇ ಕೆಲ ಜನರ ಪ್ರಕರಣ ದಾಖಲಾಗಿದೆ. ಬಂದೂಕಿನಿಂದ ಗುಂಡು ಹೊಡೆಯುವುದು ಸಿನಿಮಾದಲ್ಲಿ ನೋಡಿದ್ದೆ. ನೇರವಾಗಿಯೇ ನೋಡಬೇಕು ಎಂಬುದಾದರೆ ಬಳ್ಳಾರಿಗೆ ಬರಬೇಕು. ನೈತಿಕ ಹೊಣೆಗಾರಿಕೆ ಹೊತ್ತು ಕಾಂಗ್ರೆಸ್ ಸರ್ಕಾರ ಶಾಸಕ ನಾರಾಭರತರೆಡ್ಡಿಯನ್ನು ಬಂಧಿಸಬೇಕು ಎಂದು ಹೇಳಿದರು.
===