ಕಂಪ್ಲಿ ವೀರತ್ ಪೇಟೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ ನೀಡಿದರು.  
ಬಳ್ಳಾರಿ

ಕಾಂಗ್ರೆಸ್ ಸರ್ಕಾರ ವಿರೋಧಿಸುವ ನೈತಿಕತೆ ಇಲ್ಲ

ಕಂಪ್ಲಿ: ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನೇ ಕಾಪಿ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿ ನಾಯಕರಿಗೆ ಮಾನ ಮಾರ್ಯಾದೆ ಇದೆಯೇ ? ಎಂದು ಶಾಸಕ ಜೆ.ಎನ್.ಗಣೇಶ್ ಪ್ರಶ್ನಿಸಿದರು.
ಪಟ್ಟಣದ 17ನೇ ವಾರ್ಡ್ ವೀರತ್ ಪೇಟೆಯಲ್ಲಿ ಕೆಕೆಆರ್‌ಡಿಯಬಿಯ 35 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಾರೆ ಎಂದಿದ್ದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸುವ ನೈತಿಕತೆ ಇಲ್ಲ. 2028ರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯ ಎರಡು ಸಚಿವ ಸ್ಥಾನ ಖಾಲಿ ಇದ್ದು, ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ದೊರೆಯುವ ವಿಶ್ವಾಸ ಇದೆ ಎಂದರು.
ಪ್ರಮುಖರಾದ ಭಟ್ಟ ಪ್ರಸಾದ್, ಸಿ.ಆರ್.ಹನುಮಂತ, ವಾಲ್ಮೀಕಿ ರಘು, ಕೆ.ಮಸ್ತಾನ್ ಸಾಬ್, ಮಾಗನೂರು ಬಸವರಾಜ, ಬಿ.ಸಿದ್ದಪ್ಪ, ಬಿ.ನಾರಾಯಣಪ್ಪ, ಡಿ.ಪ್ರಶಾಂತ್, ಜಾಫರ್, ಕೆ.ವೀರೇಶ್, ಎಸ್.ಅನಿಲ್ ಇದ್ದರು.
ಎಮ್ಮಿಗನೂರಿನಲ್ಲಿ 71.50 ಲಕ್ಷ ರೂ. ವೆಚ್ಚದಲ್ಲಿ ಸಂತೆ ಮಾರುಕಟ್ಟೆ ಬೈಪಾಸ್ ರಸ್ತೆ, ಶ್ರೀರಾಮರಂಗಾಪುರದಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ನೀರಿನ ಮೇಲ್ತೊಟ್ಟಿ ನಿರ್ಮಾಣಕ್ಕೆ ಚಾಲನೆ ನೀಡಿದರು. ಕನಕಪ್ಪ ಸುಣಗಾರ, ರಾಘವೇಂದ್ರರೆಡ್ಡಿ, ಬಿ.ಸದಾಶಿವಪ್ಪ, ರಾಮಾಂಜಿನಿ, ರಾಜಾಸಾಬ್ ಇತರರಿದ್ದರು.