ಹಾರ್ಡ್‌ವೇರ್ ಮಳಿಗೆಯಲ್ಲಿ ಕಳ್ಳತನ 
ಬಳ್ಳಾರಿ

ಹಾರ್ಡ್‌ವೇರ್ ಮಳಿಗೆಯಲ್ಲಿ ಕಳ್ಳತನ

ಪ್ರಮುಖ ಮುಖ್ಯಾಂಶಗಳು

  • ಹಾರ್ಡ್‌ವೇರ್
  • ಕಳ್ಳತನ
  • ತಪಾಸಣೆ
ಬಳ್ಳಾರಿ : ಇಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ಹಾರ್ಡ್‌ವೇರ್ ಮಳಿಗೆಯೊಂದರಲ್ಲಿ 1.45 ಲಕ್ಷ ರೂ. ನಗದು ಕಳ್ಳತನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮುಖಕ್ಕೆ ಟವಲ್ ಸುತ್ತಿಕೊಂಡು ಬಂದಿದ್ದ ಖದೀಮನೊಬ್ಬ ಕಳ್ಳತನ ಎಸಗಿದ ಬಗ್ಗೆ ಸಿಸಿ ಟಿವಿ ಸೆರೆಯಾಗಿದೆ. ಕೆಲ ಕಡೆ ಸಿಸಿ ಕ್ಯಾಮೆರಾವನ್ನು ಕಡೆ ಒಡೆದು ಹಾಕಲಾಗಿದ್ದು, ಕಳ್ಳನ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸ್ಥಳದಲ್ಲಿ ಶ್ವಾನದಳ ಮತ್ತು ಪೊಲೀಸರು ತಪಾಸಣೆ ನಡೆಸಲಾಗಿದೆ. ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===