ಬಳ್ಳಾರಿಯ ಪಾಂಚಜನ್ಯ ಸಭಾಂಗಣದಲ್ಲಿ ವಿವೇಕಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರ ಲೀಲಾಮೃತ ಕಾರ್ಯಕ್ರಮ ನಡೆಯಿತು. ನಿರ್ಭಯಾನಂದ ಸರಸ್ವತಿ ಸ್ವಾಮೀಜಿ, ಉದ್ಯಮಿ ಡಾ.ರವಿರೆಡ್ಡಿ, ನಿವೃತ್ತ ಉಪನ್ಯಾಸಕ ಮಂಜುನಾಥ ಇದ್ದರು.
- ನಿರ್ಭಯಾನಂದ ಸ್ವಾಮೀಜಿ ಹೇಳಿಕೆ
- ಆಳವಾದ ಅಧ್ಯಯನ ಇರಬೇಕು
ಬಳ್ಳಾರಿ : ಮನುಷ್ಯನ ಜೀವನವನ್ನು ಸುಖ, ಶಾಂತಿ ಹಾಗೂ ಸೌಹಾರ್ದದಿಂದ ಕೂಡಿಸುವ ತತ್ವವೇ ಸನಾತನ ಹಿಂದೂ ಧರ್ಮದ ಮುಖ್ಯ ಉದ್ದೇಶವಾಗಿದೆ ಎಂದು ಗದಗ-ವಿಜಯಪುರ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ನಗರದ ಪಾಂಚಜನ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ವಿವೇಕಮಂಟಪ ಉಪನ್ಯಾಸ ಮಾಲಿಕೆಯಲ್ಲಿ ಸ್ವಾಮಿ ವಿವೇಕಾನಂದರ ಲೀಲಾಮೃತ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಬಗ್ಗೆ ಸಮಗ್ರ ಅರಿವಿಲ್ಲದೆ ಟೀಕೆ ಮಾಡುವವರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಅಂತಹವರ ಮಾತುಗಳಿಗೆ ಹೆಚ್ಚು ಮಹತ್ವವೂ ಇರುವುದಿಲ್ಲ ಎಂದರು. ಯಾರೇ ಆಗಲಿ, ಯಾವುದೇ ಧರ್ಮದ ಬಗ್ಗೆ ಮಾತನಾಡುವಾಗ ಆಳವಾದ ಅಧ್ಯಯನ ಇರಬೇಕು.
ವಿನಾಕಾರಣ ನಿರ್ದಿಷ್ಟ ಧರ್ಮವನ್ನು ಟೀಕಿಸುವುದು ಸರಿಯಲ್ಲ. ಧರ್ಮದ ನಿಜವಾದ ತತ್ವ, ಮೌಲ್ಯಗಳು ಹಾಗೂ ವಿಶ್ವಮಾನವೀಯ ಸಂದೇಶವನ್ನು ಅರ್ಥಮಾಡಿಕೊಂಡ ಬಳಿಕವೇ ಅದರ ಕುರಿತು ಅಭಿಪ್ರಾಯ ವ್ಯಕ್ತಪಡಿಸಬೇಕೇ ವಿನಾ, ಬಾಯಿಗೆ ಬಂದಂತೆ ಮಾತನಾಡುವುದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಸನಾತನ ಧರ್ಮವನ್ನು ಟೀಕಿಸುವವರಿಗೆ ಕಿಂಚಿತ್ತೂ ಧರ್ಮದ ಬಗ್ಗೆ ಜ್ಞಾನ ಇರುವುದಿಲ್ಲ. ಹೀಗಾಗಿಯೇ ಅವರು ತಮಗೆ ತೋಚಿದಂತೆ ಮಾತನಾಡುತ್ತಾರೆ ಎಂದರು.