ಕುರುಗೋಡು ಪಟ್ಟಣದ ಐತಿಹಾಸಿಕ ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿನ ವಿಗ್ರಹವನ್ನು ಗುರುವಾರ ಸಂಜೆ ಸೂರ್ಯನ ಕಿರಣಗಳು ಸ್ಪರ್ಶಿಸಿರುವುದು.
- ಸೂರ್ಯನ
- ಕಿರಣಗಳು
- ಸ್ಪರ್ಶಿಸುತ್ತವೆ
ಕುರುಗೋಡು: ಯುಗಾದಿ ದಿನವಾದ ಗುರುವಾರ ಶ್ರೀ ದೊಡ್ಡಬಸವೇಶ್ವರ ಸ್ವಾಮಿ ವಿಗ್ರಹಕ್ಕೆ ಸೂರ್ಯನ ಕಿರಣಗಳು ಸ್ಪರ್ಶಿಸುವ ಸುಂದರ ಕ್ಷಣಗಳನ್ನು ಭಕ್ತರು ಕಣ್ತುಂಬಿಕೊಂಡರು.
ಪೂರ್ವಾಭಿಮುಖವಾಗಿರುವ ಹಂಪಿ ವಿರೂಪಾಕ್ಷನಿಗೆ ಯುಗಾದಿಯ ದಿನ ಬೆಳಗ್ಗೆ ಸೂರ್ಯನ ಕಿರಣಗಳು ಸ್ಪರ್ಶಿಸುತ್ತವೆ. ಪಶ್ಚಿಮಾಭಿಮುಖವಾಗಿರುವ ಪಟ್ಟಣದ ದೊಡ್ಡಬಸವೇಶ್ವರನಿಗೆ ಅದೇ ದಿನ ಸಂಜೆ ಸೂರ್ಯಾಸ್ತದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಸ್ಪರ್ಶಿಸಿ ವಿಸ್ಮಯಮೂಡಿಸಿತು. ಸೃಷ್ಟಿಯ ಈ ಅಪೂರ್ಣ ಕ್ಷಣದ ಸೊಬಗನ್ನು ಕಣ್ತುಂಬಿಕೊಳ್ಳಲು ದೇವಸ್ಥಾನದಲ್ಲಿ ನೂರಾರು ಭಕ್ತರು ನೆರೆದಿದ್ದರು.
ಅಪೂರ್ವದೃಶ್ಯದ ಸೊಬಗನ್ನು ಕಂಡು ಪುಳಕಿತರಾದ ಭಕ್ತರು ಸ್ವಾಮಿಗೆ ಜಯಕಾರ ಕೂಗಿ ಭಕ್ತಿ ಸಮರ್ಪಿಸಿದರು. ಈ ಸುಂದರ ದೃಶ್ಯವನ್ನು ಕೆಲವು ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಮತ್ತು ವಿಡಿಯೋ ಚಿತ್ರೀಕರಿಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಪಂಚಾಂಗ ಪಠಣ: ದೇವಸ್ಥಾನದ ಆವರಣದಲ್ಲಿ ವಾರ್ಷಿಕ ಪಂಚಾಂಗ ಪಠಣ ಕಾರ್ಯಕ್ರಮ ನಡೆಯಿತು. ವೆಂಕಟೇಶ ಜೋಷಿ ಪಂಚಾಂಗ ಪಠಣದ ಜತೆಗೆ ವಾರ್ಷಿಕ ರಾಶಿ ಭವಿಷ್ಯ ತಿಳಿಸಿದರು.