ಹಗರಿಬೊಮ್ಮನಹಳ್ಳಿಯ ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ಪುರಸಭೆ ಅಧ್ಯಕ್ಷ ಎಂ.ಮರಿ ರಾಮಪ್ಪ, ಪ್ರಮುಖರಾದ ದಶಮಾಪುರ ಮರಿಯಪ್ಪ, ಯಡ್ರಮ್ಮನಹಳ್ಳಿ ಮರಿಯಪ್ಪ, ಅರ್ಜುನ್, ಆನಂದೇವನಹಳ್ಳಿ ಎಚ್.ಪ್ರಭಾಕರ, ಕೋಗಳಿ ಉಮೇಶ, ಬ್ಯಾಲಾಳ್ ಮಂಜುನಾಥ ಇತತರಿದ್ದರು. 
ಬಳ್ಳಾರಿ

ಹೋರಾಟದಿಂದ ಸೌಲಭ್ಯ ಪಡೆಯುವ ಸ್ಥಿತಿ

ಪ್ರಮುಖ ಮುಖ್ಯಾಂಶಗಳು

  • ವಿಜಯೋತ್ಸವ
  • ಭೀಮ ಕೋರೆಗಾಂವ್

ಹೋರಾಟದಿಂದ ಸೌಲಭ್ಯ ಪಡೆಯುವ ಸ್ಥಿತಿ

ಹಗರಿಬೊಮ್ಮನಹಳ್ಳಿ: ಎಲೆಮರೆಯ ಕಾಯಿಯಾಗಿದ್ದ ಕೋರೆಗಾಂವ್ ವಿಜಯೋತ್ಸವವನ್ನು ಡಾ.ಬಿ.ಆರ್.ಅಂಬೇಡ್ಕರ್ ಆಚರಣೆಗೆ ತಂದರು ಎಂದು ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷ ಜೆ.ಎಂ.ವೀರಸಂಗಯ್ಯ ಹೇಳಿದರು.
ಪಟ್ಟಣದ ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದಲಿತ ವಿವಿಧ ಸಂಘಟನೆಗಳಿಂದ ಗುರುವಾರ ಹಮ್ಮಿಕೊಂಡಿದ್ದ 208ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದಿನ ಶೂರರ ದಿನವಾಗಿದೆ. ತುಳಿತಕ್ಕೊಳದ, ಸೌಲಭ್ಯಗಳಿಂದ ವಂಚಿತವಾಗಿರುವ ದಲಿತ ಸಮುದಾಯಗಳು ಹೋರಾಟದ ಮೂಲಕವೇ ಸೌಲಭ್ಯಗಳನ್ನು ಪಡೆಯುವ ಪರಿಸ್ಥಿತಿ ಇದೆ ಎಂದರು. ಪುರಸಭೆ ಅಧ್ಯಕ್ಷ ಎಂ.ಮರಿ ರಾಮಪ್ಪ ಮಾತನಾಡಿ, ದಲಿತ ಸಮುದಾಯ ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು. ಯುವಕರು ಸಂಘಟನೆ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಬೇಕು ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ದೇವೇಂದ್ರ, ಜನವಾದಿ ಮಹಿಳಾ ಸಂಘದ ಅಧ್ಯಕ್ಷೆ ಸರ್ದಾರ್ ಹುಲಿಗೆಮ್ಮ, ಗ್ಯಾರಂಟಿ ಯೋಜನೆ ಅನುಷ್ಠಾನದ ವಿಜಯನಗರ ಜಿಲ್ಲಾ ಸದಸ್ಯ ಹೆಗ್ಡಾಳ್ ಪರಶುರಾಮ, ಪ್ರಮುಖರಾದ ಹೆಗ್ಡಾಳ್ ರವಿ, ಗಣೇಶ ಅಲಬೂರು, ಕಲ್ಲಳ್ಳಿ ನಾಗರಾಜ, ಹೇಮಣ್ಣ, ಲಿಂಗರಾಜ, ಹರಿಗೊಂಡನಹಳ್ಳಿ ದುರುಗಪ್ಪ, ಏಣಿಗಿ ಎಚ್.ಕೋಟೆಪ್ಪ, ಪಕ್ಕೀರಪ್ಪ, ವೆಂಕಟೇಶ್, ನೀಲಗಿರಿ, ರಾಮಣ್ಣ, ಮಹೇಶ್, ಮೈಲಪ್ಪ, ಕೆಚ್ಚಿನಬಂಡಿ ದುರುಗಪ್ಪ ಇತರರಿದ್ದರು.