ಕುರುಗೋಡು ನಾಡಗೌಡ ಸರ್ಕಲ್ ಬಳಿ ಗೂಳಿಗಳು ಗುದ್ದಾಡುತ್ತಿರುವುದು.  
ಬಳ್ಳಾರಿ

ಕುರುಗೋಡಿನಲ್ಲಿ ಬಿಡಾಡಿ ದನಗಳ ಉಪಟಳ

ಕುರುಗೋಡು: ಪಟ್ಟಣದಲ್ಲಿ ಬಿಡಾಡಿ ದನಗಳ ಉಪಟಳ ಹೆಚ್ಚಾಗಿದೆ. ಇದರಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಆದರೂ, ಕ್ರಮಕೈಗೊಳ್ಳುವಲ್ಲಿ ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ.
ದೊಡ್ಡಬಸವೇಶ್ವರ ದೇವಾಲಯ, ಗೆಣಕೆಹಾಳ್, ಬಾದನಹಟ್ಟಿ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಇತರೆಡೆ ಜನ ಹಾಗೂ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಬಿಡಾಡಿ ದನಗಳು ಎಲ್ಲೆಂದರಲ್ಲಿ ರಸ್ತೆಯಲ್ಲಿ ಮಲಗಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ತರಕಾರಿ, ಹಣ್ಣು ಸೇರಿದಂತೆ ಇತರ ವಸ್ತುಗಳನ್ನು ಕಿತ್ತು ತಿನ್ನುತ್ತಿವೆ. ಆಗಾಗ ಮದವೇರಿದ ಗೂಳಿಗಳ ಕಾಳಗದಿಂದ ಬೈಕ್ ಮತ್ತು ಇತರ ವಾಹನ ಜಖಂ ಆಗಿವೆ. ಪ್ರಮುಖರಾದ ಪ್ರವೀಣ, ಗೊಲ್ಲರ ಗೋವಿಂದ, ಪಾರ್ಥ, ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ.