ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಶುಕ್ರವಾರ ನಡೆದ ಮೊಹರಂ ಹಬ್ಬದ ನಿಮ್ಮಿತ್ತ ಚೌಡದಾಪುರ ಸ್ವಾಮಿಯ ಸೇವಕ ಬಿಲ್ಲನ್ನೇರಿ ಕಾರ್ಣಿಕೋತ್ಸವ ನುಡಿದರು. 
ಬಳ್ಳಾರಿ

ಮಳೆ ಬೆಳೆ ಕಷ್ಟದಿಂದ ಸಂಪಾಯಿತಲೇ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಚೌಡದಾಪುರ ಸ್ವಾಮಿಯ ಸೇವಕ ನುಡಿ
  • ಹಗರಿಬೊಮ್ಮನಹಳ್ಳಿ ಹಂಪಾಪಟ್ಟಣ ಕಾರ್ಣಿಕ
ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಮೊಹರಂ ಹಬ್ಬದ ಕಾರ್ಣಿಕೋತ್ಸವವು ನಡೆದುಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಡೆದ ಉತ್ಸವದಲ್ಲಿ ಶ್ರೀ ಚೌಡದಾಪುರ ಸ್ವಾಮಿಯ ಸೇವಕ ಬಿಲ್ಲನ್ನೇರಿ ಮಳೆ ಬೆಳೆ ಕಷ್ಟದಿಂದ ಸಂಪಾಯಿತಲೇ ಸಂತೋಷದ ದಿನ್ ಎಂದು ಕಾರ್ಣಿಕ ನುಡಿದರು.
ಇದಕ್ಕೂ ಮುನ್ನ ಗಂಗೆಪೂಜೆ, ನೀರಿನಲ್ಲಿ ದೀಪ ಹಚ್ಚುವುದು, ಅರಿಕೆಯ ಸಕ್ಕರೆ ದಾನ ನೀಡುವುದು, ಪಟಾಕ್ಷಿಯ ಹರಾಜು, ಸ್ವಾಮಿಯ ಕಿಚ್ಚು ಹಾಯುವುದು, ಹುಡಿ ತುಂಬುವುದು, ನಂತರ ಅಲಾಯಿ ಕುಣಿತ ನಡೆದವು. ಬೆಳಗಿನ ಜಾವದವರೆಗೂ ರಿವಾಯತ್ ಜಾನಪದ, ಕಲಾವಿದ ಬಡೇಸಾಬ್ ತಂಡದವರು ರಿವಾಯತ್ ಸವಾಲ್ ಪದಗಳನ್ನಾಡಿದರು. ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿತ್ತು.