ಕಾನಹೊಸಹಳ್ಳಿ ಸಮೀಪದ ಗೆದ್ದಲಗಟ್ಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಹಿಪ್ರಾ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಉದ್ಘಾಟಿಸಿದರು. ಬಿಇಒ ಮೈಲೇಶ್ ಬೇವೂರು, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ರಾಮಣ್ಣ, ಸಿಆರ್‌ಪಿ ಪ್ರಕಾಶ್ ಇತರರಿದ್ದರು. 
ಬಳ್ಳಾರಿ

ಶಿಕ್ಷಕರ ಶಕ್ತಿ ಅಪಾರ ಶಿಕ್ಷಣಕ್ಕಿದೆ ಹೆಚ್ಚಿನ ಮಹತ್ವ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ

ಶಿಕ್ಷಕರ ಶಕ್ತಿ ಅಪಾರ ಶಿಕ್ಷಣಕ್ಕಿದೆ ಹೆಚ್ಚಿನ ಮಹತ್ವ

ಕಾನಹೊಸಹಳ್ಳಿ: ಗ್ರಾಮಸ್ಥರ ಸಹಕಾರದಿಂದ ಆರಂಭವಾದ ಸಹಿಪ್ರಾ ಶಾಲೆಯಲ್ಲಿ ಇದೀಗ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಈ ಶಾಲೆ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತೇನೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಗೆದ್ದಲಗಟ್ಟೆ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಹಿಪ್ರಾ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೆದ್ದಲಗಟ್ಟೆ ಗ್ರಾಮ ಕೆರೆ ತುಂಬಿಸುವ ಯೋಜನೆಯಿಂದ ವಂಚಿತವಾಗಿದೆ. ಅರಣ್ಯ ಪ್ರದೇಶದಿಂದ ಬರುವ ನೀರಿಗೆ ಅಡ್ಡಲಾಗಿ ದೊಡ್ಡ ಕೆರೆ ನಿರ್ಮಿಸುವ ಕನಸು ಇದೆ. ಇದರಿಂದ ನಮ್ಮೂರಿಗೂ ಅಂತರ್ಜಲಮಟ್ಟ ಹೆಚ್ಚಾಗಲಿದೆ ಎಂದರು.

ಶಿಕ್ಷಕರ ಶಕ್ತಿ ಅಪಾರವಾಗಿದ್ದು, ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. 258 ಸರ್ಕಾರಿ ಶಾಲೆಗಳು, ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳ ಪ್ರಗತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಅಭಿವೃದ್ಧಿಯೇ ನನ್ನ ಗುರಿ. ಗೆದ್ದಲಗಟ್ಟೆ ಮತ್ತು ಕಾಮಯ್ಯನಹಟ್ಟಿಗೆ ಹೈಮಾಸ್ಟ್ ವಿದ್ಯುತ್ ದೀಪಗಳು ಹಾಗೂ ಚರಂಡಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಬಿಇಒ ಮೈಲೇಶ್ ಬೇವೂರ್ ಮಾತನಾಡಿ, ಕೂಡ್ಲಿಗಿ ಕ್ಷೇತ್ರದ 67 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಶಿಕ್ಷಣಕ್ಕೆ ಮಹತ್ವ ನೀಡುವ ಹಳ್ಳಿಗಳು ಅಭಿವೃದ್ಧಿಗೆ ಪೂರಕವಾಗಲಿದೆ. 7 ಕೆಪಿಎಸ್ಸಿ ಶಾಲೆಗಳು ಜೂನ್‌ನಿಂದ ಆರಂಭವಾಗಲಿ ಎಂದರು.
ಮುಖ್ಯಶಿಕ್ಷಕರಾದ ಬಸೆಟ್ಟೆಪ್ಪ, ರಾಜಪ್ಪ ದೂಪದಹಳ್ಳಿ, ಎಸ್ಡಿಎಂಸಿ ಅಧ್ಯಕ್ಷ ಪರಶುರಾಮಪ್ಪ, ಉಪಾಧ್ಯಕ್ಷೆ ಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ರಾಮಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೊಟ್ರೇಶಗೌಡ, ಬಿಡಿಸಿಸಿ ಬ್ಯಾಂಕ್ ಡಿಜಿಎಂ ತಿಮ್ಮಾರೆಡ್ಡಿ, ಸಿಡಿಪಿಒ ಮಾಲಂಬೀ, ನಿವೃತ್ತ ಪೋಸ್ಟ್ ಮಾಸ್ಟರ್ ಜಿ.ಸರೋಜಮ್ಮ, ನಿವೃತ್ತ ಶಿಕ್ಷಕರಾದ ಜಿ.ಪರಿಮಳಾ, ಸಿದ್ದಯ್ಯಸ್ವಾಮಿ, ರೇವಣ್ಣ, ವಾಸುರಾಂ ನಾಯ್ಕ, ನಿವೃತ್ತ ನೌಕರರ ಸಂಘದ ತಳವಾರ ಶರಣಪ್ಪ, ಭೂದಾನಿ ಸಿದ್ದಲಿಂಗಸ್ವಾಮಿ, ರಾಮದುರ್ಗ ಸೂರ್ಯಪಾಪಣ್ಣ, ಹರೀಶ್ ಗೌಡ, ಪಿಎಸ್‌ಐ ಸುಬ್ರಹ್ಮಣ್ಯಂ, ಸಿಆರ್‌ಪಿ ಪ್ರಕಾಶ್, ಪಿಡಿಒ ವಿಶ್ವನಾಥ, ನಿವೃತ್ತ ಪ್ರಾಚಾರ್ಯ ಗುರುಸಿದ್ದಪ್ಪ ಇತರರಿದ್ದರು.