ಹಗರಿಬೊಮ್ಮನಹಳ್ಳಿ ಹೊಸ ಬಸ್ ನಿಲ್ದಾಣದ ಎದುರು ಶ್ರೀಕನಕ ವೃತ್ತದ ಬಳಿ ಕುರುಬ ಸಮುದಾಯದಿಂದ ಕಾಗಿನೆಲೆ ಸಿದ್ಧರಾಮಾನಂದ ಸ್ವಾಮೀಜಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ತಾಲೂಕು ಅಧ್ಯಕ್ಷ ಎಂ.ಶಿವರಾಜ, ಅಹಿಂದ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಇತರರಿದ್ದರು.
- ಕಾಗಿನೆಲೆ
- ಸಿದ್ಧರಾಮಾನಂದ ಸ್ವಾಮೀಜಿ
ಶ್ರೀಗಳ ಅಗಲಿಕೆಯಿಂದ ಸಮುದಾಯಕ್ಕೆ ಅಪಾರ ನಷ್ಟ
ಹಗರಿಬೊಮ್ಮನಹಳ್ಳಿ: ಕಾಗಿನೆಲೆ ಸಿದ್ಧರಾಮಾನಂದ ಸ್ವಾಮೀಜಿಗಳನ್ನು ಕಳೆದುಕೊಂಡ ಪೀಠ ಮಾತ್ರ ಬರಿದಾಗಿಲ್ಲ, ಇಡೀ ಸಮುದಾಯಕ್ಕೆ ಅಪಾರ ನಷ್ಟವಾಗಿದೆ ಎಂದು ಅಹಿಂದ ಸಂಘಟನೆಯ ವಿಜಯನಗರ ಜಿಲ್ಲಾಧ್ಯಕ್ಷ ಬುಡ್ಡಿಬಸವರಾಜ ಸಂತಾಪ ಸೂಚಿಸಿದರು.
ಕಾಗಿನೆಲೆ ಸಿದ್ಧರಾಮಾನಂದ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಶ್ರೀಕನಕ ವೃತ್ತದ ಬಳಿ ಗುರುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀಗಳ ಮಾತು ಸಮುದಾಯವನ್ನು ತಿದ್ದುವಂತಿದ್ದವು. ಅವರ ಮಾರ್ಗದರ್ಶನದಲ್ಲಿ ಯುವ ಸಮೂಹ ಬದಲಾಗುತ್ತಾ ಶಿಕ್ಷಣದತ್ತ ಒಲವು ತೋರಿತ್ತು. ಆದರೆ, ಅವರ ಅಗಲಿಕೆ ಸುದ್ದಿಕೇಳಿ ಸಮುದಾಯಕ್ಕೆ ದಿಕ್ಕೂ ತೋಚದಂತಾಗಿದೆ ಎಂದರು.
ತಾಲೂಕು ಕುರುಬ ಸಂಘದ ಅಧ್ಯಕ್ಷ ಎಂ.ಶಿವರಾಜ, ಪ್ರಧಾನ ಕಾರ್ಯದರ್ಶಿ ಪಿ.ಹನುಮಂತಪ್ಪ, ಪ್ರಮುಖರಾದ ಸೊನ್ನದ ಟಿ.ಮಹೇಶ, ರವಿಕುಮಾರ್ ತಂಬ್ರಹಳ್ಳಿ, ಕೋಲ್ ಶಾಂತಪ್ಪ, ಎಚ್.ಪ್ರಕಾಶ್, ಹೊಸ ಮನೆ ಮಂಜುನಾಥ್, ಮೇಟಿ ಮಂಜುನಾಥ, ಮುಟುಗನಹಳ್ಳಿ ಉಮೇಶ, ಕೃಷ್ಣಾಪುರ ದೊಡ್ಡಬಸಪ್ಪ, ರಾಮಣ್ಣ, ಎಸ್.ಕೆ.ಗೋಣೆಪ್ಪ, ಸೊನ್ನದ ಸಂತೋಷ, ದುರ್ಗಪ್ಪ, ಕೋಟೆಪ್ಪ, ರವೀಂದ್ರ ಇತರರಿದ್ದರು.