ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ದೇವಸ್ಥಾನದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಆಚರಿಸಲಾಯಿತು.
ಕಂಪ್ಲಿ: ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ನಿಮಿತ್ತ ಬುಧವಾರ ತಾಲೂಕಿನ ವಿವಿಧೆಡೆ ದಾಸೋಹ ದಿನ ಆಚರಿಸಲಾಯಿತು.
ದೇವಸಮುದ್ರ ಗ್ರಾಮದ ತುರುಮುಂದಿ ಬಸವೇಶ್ವರ ದೇವಸ್ಥಾನದಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೀರಶೈವ ಸಮಾಜದ ಪ್ರಮುಖ ಅಳ್ಳಳ್ಳಿ ವೀರೇಶ್ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿ ಅವರು ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿದ್ದರು. ಶ್ರೀಗಳ ಜೀವನ ತತ್ವ, ಆದರ್ಶ ಅನುಕರಣೀಯವಾಗಿದೆ ಎಂದರು.
ಪ್ರಮುಖರಾದ ಕಡೇಮನಿ ಪಂಪಾಪತಿ, ಜಿ.ವೀರನಗೌಡ, ಜಿ.ಮಲ್ಲಿಗೌಡ, ಅಮರೇಗೌಡ, ಜಿ.ಗಣೇಶಗೌಡ, ಜಿ.ಬಸವಗೌಡ, ಜಿ.ಲಿಂಗನಗೌಡ, ಪ್ರಭುಸ್ವಾಮಿ, ಅರಳೆ ಮುತ್ತಯ್ಯ, ಕೋರಿ ಜಡೆಪ್ಪ, ಸೂರಶೆಟ್ಟಿ ವೀರೇಶಪ್ಪ, ಮೇಟಿ ಶಿವನಗೌಡ ಸೇರಿ ಇತರರಿದ್ದರು.