ಬಳ್ಳಾರಿಯ ರೈಲು ನಿಲ್ದಾಣದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಹಿಂದು ಯುವಕ ದೀಪು ಚಂದ್ರದಾಸ್ ಹತ್ಯೆ ಖಂಡಿಸಿ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಅಧ್ಯಕ್ಷ ಕೆ.ಎಂ.ಮಹೇಶ್ವರ ಸ್ವಾಮಿ, ಪದಾಧಿಕಾರಿಗಳಾದ ಲಿಂಗನಗೌಡ ಪಾಟೀಲ್, ಡಾ.ಪುರುಷೋತ್ತಮಗೌಡ, ಗಂಗಾಧರಯ್ಯ, ಶಿವರೆಡ್ಡಿ, ರಾಜಶೇಖರ, ಮಂಜುನಾಥ, ತಿಪ್ಪೇಸ್ವಾಮಿ ಇದ್ದರು. 
ಬಳ್ಳಾರಿ

ಹಿಂದು ಯುವಕನ ಹತ್ಯೆ ಖಂಡನೀಯ

ಪ್ರಮುಖ ಮುಖ್ಯಾಂಶಗಳು

  • ಬಾಂಗ್ಲಾದೇಶ
  • ಮತಾಂಧರ
  • ಪ್ರತಿಭಟನೆ
ಬಳ್ಳಾರಿ : ಬಾಂಗ್ಲಾದಲ್ಲಿ ಹಿಂದು ಯುವಕ ದೀಪು ಚಂದ್ರದಾಸ್ ಹತ್ಯೆ ಖಂಡಿಸಿ, ಇಲ್ಲಿನ ರೈಲು ನಿಲ್ದಾಣದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ಪ್ರಜ್ಞಾವಂತ ನಾಗರಿಕರ ವೇದಿಕೆಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ಚಂದ್ರದಾಸ್ ಅವರನ್ನು ಪೊಲೀಸರ ಸಮಕ್ಷಮದಲ್ಲೇ ಮತಾಂಧರ ಗುಂಪೊಂದು ಹಲ್ಲೆ ಮಾಡಿ ಬೆಂಕಿ ಹಚ್ಚಿ ಕೊಂದಿದ್ದಾರೆ. ಈ ಪ್ರಕರಣ ಜಗತ್ತಿನ ಮನುಕುಲವನ್ನು ನೋವಿನಲ್ಲಿ ಮುಳುಗಿಸಿದೆ. ಆ ಕೊಲೆಯ ನಂತರ ಅವರದೇ ದೇಶದ ಮುಸ್ಲಿಂ ಕುಟುಂಬದವರ ಮನೆಗೆ ಬೆಂಕಿ ಹಚ್ಚಿ ಮೂರು ವರ್ಷದ ಕಂದಮ್ಮನನ್ನು ಕೊಂದಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದು, ಕ್ರೈಸ್ತ, ಬೌದ್ಧ, ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲದಂತಾಗಿದೆ. ಆ ದೇಶದ ಸರ್ಕಾರ ನಿಷ್ಕ್ರೀಯವಾಗಿದೆ. ಆದ್ದರಿಂದ, ಕೂಡಲೇ ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆ ಬಾಂಗ್ಲಾ ಭೇಟಿ ರಕ್ಷಣೆ ನೀಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದಲ್ಲಿ ನಡೆಯುವ ಹಿಂದುಗಳ ಮೇಲಿನ ನರಮೇಧ ಬಗ್ಗೆ ಜಾಗತಿಕ ಸಮುದಾಯದ ಗಮನಕ್ಕೆ ತರಬೇಕು. ಅವಶ್ಯವಿದ್ದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದಲ್ಲಿ ನೂತನ ಪ್ರಜಾಸತ್ತಾತ್ಮಕ ಜಾತ್ಯಾತೀತ ಸರ್ಕಾರ ಸ್ಥಾಪಿಸಿ ಬುದ್ಧಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.