ಹಗರಿಬೊಮ್ಮನಹಳ್ಳಿಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಡಾ.ಪರಮೇಶ್ವರ ಸೊಪ್ಪಿಮಠ ಮಾತನಾಡಿದರು. ಹಿರಿಯ ಸಾಹಿತಿಗಳಾದ ಹಿ.ಮಾ.ಕೊಟ್ರಯ್ಯ, ಸಕ್ರಳ್ಳಿ ಕೊಟ್ರೇಶ್, ಉಪನ್ಯಾಸಕಿ ಸುಧಾ ಚಿದಾನಂದಗೌಡ ಇದ್ದರು.
- ಉಪನ್ಯಾಸಕಿ ಸುಧಾ ಚಿದಾನಂದಗೌಡ ಸಲಹೆ
ಹಗರಿಬೊಮ್ಮನಹಳ್ಳಿ: ಗುರುಭವನದಲ್ಲಿ ಕಸಾಪ ಆಜೀವ ಸದಸ್ಯರು ಹಾಗೂ ಕನ್ನಡಾಭಿಮಾನಿಗಳ ಸಭೆ ಶನಿವಾರ ನಡೆಯಿತು. ವಿಜಯನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಮತ್ತು ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂ.ಪಿ.ಎಂ.ಮಂಜುನಾಥ್ ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಯಿತು.
ಉಪನ್ಯಾಸಕಿ ಸುಧಾ ಚಿದಾನಂದಗೌಡ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನೆ ಗ್ರಾಮೀಣ ಮಟ್ಟದಿಂದಲೇ ಗಟ್ಟಿಯಾಗಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಎನ್.ಎಂ.ಗೌಸ್ ಮಾತನಾಡಿ, ಪರಿಷತ್ತಿನ ಉಳಿವು ಮತ್ತು ಬೆಳವಣಿಗೆಗೆ ಯುವಕರು ಸಹಕರಿಸಬೇಕು ಎಂದರು. ತಾಲೂಕಿನ ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಸಾಹಿತ್ಯಾಸಕ್ತರು ಸಾಹಿತ್ಯ ಬೆಳವಣಿಗೆ ಹಾಗೂ ಜಿಲ್ಲೆಯಾದ್ಯಂತ ಸಾಹಿತ್ಯ ಚಟುವಟಿಕೆಗಳನ್ನು ಬಲಪಡಿಸುವ ಕುರಿತು ಚರ್ಚಿಸಿದರು.
ಸಾಹಿತ್ಯಾಸಕ್ತ ಸಕ್ರಳ್ಳಿ ಕೊಟ್ರೇಶ್, ಡಾ.ಪರಮೇಶ್ವರಯ್ಯ ಸೊಪ್ಪಿಮಠ, ಹಿರಿಯ ಸಾಹಿತಿ ಹಿ.ಮಾ.ಕೊಟ್ರಯ್ಯ, ಕಸಾಪ ಜಿಲ್ಲಾ ಮಾಜಿ ಕಾರ್ಯದರ್ಶಿ ಎ.ಎಸ್.ಕರಬಸಪ್ಪ, ಮಾಜಿ ಉಪಾಧ್ಯಕ್ಷ ಚಿನ್ನಪ್ಪ ಮಲ್ಕಿ ಒಡೆಯರ್, ಮಾಜಿ ತಾಲೂಕು ಕಾರ್ಯದರ್ಶಿ ಬಿ.ಜಿ.ಬಡಿಗೇರ್, ನಿಕಟಪೂರ್ವ ಅಧ್ಯಕ್ಷ ಸಿ.ಶಿವಾನಂದ, ನಿವೃತ್ತ ಶಿಕ್ಷಕ ಸಿ.ರವಿ, ಪ್ರಮುಖರಾದ ಎಂ.ಪಿ.ಎಂ.ಮಂಜುನಾಥ, ಬಾಷಾಸಾಬ್, ಪೂಜಪ್ಪ, ವಟ್ಟಮ್ಮನಹಳ್ಳಿ ಪಂಪಣ್ಣ, ಗಣೇಶರಾವ್ ಹವಾಲ್ದಾರ್, ಉಷಾ ವೆಂಕಟೇಶ್, ಎಂ.ಶಂಭುಲಿಂಗಪ್ಪ ಇತರರಿದ್ದರು.