ಕಾನಹೊಸಹಳ್ಳಿಯಲ್ಲಿ ದಲಿತ ಪರ ಸಂಘಟನೆಗಳಿಂದ ಭೀಮಾ-ಕೋರೆಗಾಂವ್ ವಿಜಯೋತ್ಸವದ ಮೆರವಣಿಗೆ ಮಾಡಲಾಯಿತು. 
ಬಳ್ಳಾರಿ

ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಭೀಮಾ-ಕೋರೆಗಾಂವ್
  • ಕಾಂತ್ರಿ
  • ದಲಿತರ ಜೀವನ ಶೈಲಿ
ಕಾನಹೊಸಹಳ್ಳಿ: ಭೀಮಾ-ಕೋರೆಗಾಂವ್ ಕಾಂತ್ರಿ ದಲಿತರ ಜೀವನ ಶೈಲಿ ಹಾಗೂ ಶೈಕ್ಷಣಿಕ ಸ್ಥಿತಿಗತಿ ಬದಲಾಗುವಂತೆ ಮಾಡಿದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ದುರುಗೇಶ ಹೇಳಿದರು.
ಗ್ರಾಮದಲ್ಲಿ ದಲಿತ ಪರ ಸಂಘಟನೆಗಳಿಂದ ಶನಿವಾರ ಹಮ್ಮಿಕೊಂಡಿದ್ದ ಭೀಮಾ-ಕೋರೆಗಾಂವ್ ಕಾಂತ್ರಿಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ದಲಿತ ಮುಖಂಡರು ನೊಂದ ಜನರ ಪರವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಬೇಕೆ ಹೊರತು ವಿಮುಖರಾಗಬಾರದು ಎಂದರು. ಹುಲಿಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆಂರಭವಾದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 50ರ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರಿಗೆ ನಡೆಯಿತು.
ದಲಿತ ಮುಖಂಡರಾದ ಎಳನೀರು ಗಂಗಣ್ಣ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ.ಗುದ್ದಿ ದುರುಗೇಶ, ತಾಲೂಕು ಸಂಚಾಲಕ ಬಡಲಡಕು ದುರುಗೇಶ, ಪ್ರಮುಖರಾಧ ಮಾಕನಡಕು ಕುಮಾರ್, ಸಿ.ಎಸ್.ಪುರ ಮಹೇಶ, ಗ್ರಾಪಂ ಸದಸ್ಯ ಎಂ.ಹೊನ್ನೂರಸ್ವಾಮಿ, ಕಾನಾಮಡುಗು ಪಕ್ಕೀರಪ್ಪ, ನೀರುಗಂಟಿ ತಿಪ್ಪೇಶಿ, ಮಂಜುನಾಥ, ಬಸವರಾಜ, ಸುರೇಶ, ಮಂಗಾಪುರ ದಡಾರಪ್ಪ, ಜೀತೇಂದ್ರ, ಮೂಗಪ್ಪ, ಅಜ್ಜಯ್ಯ ಇತರರಿದ್ದರು.