ಬಳ್ಳಾರಿಯ ಕುಪ್ಪಗಲ್ಲು ಅಯ್ಯಪ್ಪ ನ್ಯಾಷನಲ್ ಸ್ಕೂಲ್‌ನಲ್ಲಿ ಜಿಲ್ಲಾ ಕಸಾಪದಿಂದ ಆಯೋಜಿಸಿದ್ದ ದತ್ತಿ ಕಾರ್ಯಕ್ರಮವನ್ನು ನಿ.ಉಪನ್ಯಾಸಕ ಎ.ತಿಮ್ಮನಗೌಡ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಕಾತ್ಯಾಯಿನಿ, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ವಕೀಲರಾದ ಅರಿವಿ ಭೀಮನಗೌಡ, ಎರ‌್ರಿಸ್ವಾಮಿ, ಬಿಡಿಸಿಸಿ ಉಪಾಧ್ಯಕ್ಷ ಎಸ್.ದೊಡ್ಡನಗೌಡ ಇತರರಿದ್ದರು. 
ಬಳ್ಳಾರಿ

ಮೌಲ್ಯಗಳ ಕುಸಿತ ಅಘಾತಕಾರಿ

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ
ಬಳ್ಳಾರಿ : ವಿದ್ಯುನ್ಮಾನ ಯುಗದಲ್ಲಿ ಮಾನವೀಯ ಮೌಲ್ಯಗಳ ಕುಸಿತ ಆಘಾತಕಾರಿ ಎಂದು ನಿವೃತ್ತ ಉಪನ್ಯಾಸಕ ಎ.ತಿಮ್ಮನಗೌಡ ಹೇಳಿದರು. ನಗರದ ಕುಪ್ಪಗಲ್ಲು ಅಯ್ಯಪ್ಪ ನ್ಯಾಷನಲ್ ಸ್ಕೂಲ್‌ನಲ್ಲಿ ಜಿಲ್ಲಾ ಕಸಾಪ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕುಪ್ಪಗಲ್ಲು ನಾಗಪ್ಪ ದತ್ತಿ, ವಡ್ಡಿನಶೆಟ್ರ ಸಿದ್ದರಾಮಯ್ಯ, ಮಹಾಂತಮ್ಮ , ಸಂಗನಕಲ್ಲು ಶಾಂತಮ್ಮ ಸ್ಮಾರಕ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ನಾವು ಭೌತಿಕ ಸಂಪತ್ತನ್ನು ಗಳಿಸುವುದೇ ಜೀವನದ ಪರಮ ಗುರಿಯಾಗಿದೆ. ಮಾನವೀಯ ಸಂಬಂಧಗಳು ದಿನದಿಂದ ದಿನಕ್ಕೆ ಬದಲಾಗಿ ಸಾಮಾಜಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗಿದೆ ಎಂದರು.
ಶಿಕ್ಷಕ ಪಿ.ಹರಿಪ್ರಸಾದ್ ಮಾತನಾಡಿ, ನೈತಿಕ ಜೀವನ ನಮ್ಮ ಸಾಮಾಜಿಕ ಜವಾಬ್ದಾರಿ ಹೆಚ್ಚಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯದಿಂದಲೂ ನೈತಿಕ ಮೌಲ್ಯ ರೂಢಿಸಿಕೊಂಡು ತಮ್ಮ ಭವಿಷ್ಯ ರೂಪಿಸಕೊಳ್ಳಬೇಕು ಎಂದು ಕರೆ ನೀಡಿದರು.
===