ಹಗರಿಬೊಮ್ಮನಹಳ್ಳಿ ಪುರ ಪ್ರವೇಶ ಮಾಡಿದ ಜೈನ ಮುನಿ ಮಿಮಲಸಾಗರ ಸುರಿಸ್ವರ ನೇತೃತ್ವದ ತಂಡವನ್ನು ಮೆರವಣಿಗೆ ಮೂಲಕ ಜೈನ ಮಂದಿರಕ್ಕೆ ಕರೆದೊಯ್ಯಲಾಯಿತು. ಜೈನ ಸಮುದಾಯದ ಪ್ರಮುಖರಾದ ಕಾಂತಿಲಾಲ್ ಜೈನ್, ದಿನೇಶ ದಾರಿವಾಲ, ವರ್ತಕರ ಸಂಘದ ತಾಲೂಕು ಅಧ್ಯಕ್ಷ ಬದಾಮಿ ಮೃತ್ಯುಂಜಯ ಮತ್ತಿತರರಿದ್ದರು. 
ಬಳ್ಳಾರಿ

ಜೈನಮುನಿಗಳ ಪುರ ಪ್ರವೇಶ ಅದ್ದೂರಿ

ಹಗರಿಬೊಮ್ಮನಹಳ್ಳಿ: ಜೈನ ಮುನಿ ಮಿಮಲಸಾಗರ ಸುರಿಸ್ವರ ನೇತೃತ್ವದ ತಂಡದ ಪುರ ಪ್ರವೇಶ ಕಾರ್ಯಕ್ರಮ ಗುರುವಾರ ಅದ್ದೂರಿಯಾಗಿ ನಡೆಯಿತು.
ಶ್ವೇತಾಂಬರ ಸಂಘ, ಜೈನ ಸಮುದಾಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳ ನೇತೃತ್ವದಲ್ಲಿ ವಾದ್ಯಮೇಳ ಗಳೊಂದಿಗೆ ಸ್ವಾಗತಿಸಲಾಯಿತು. ಬಳಿಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ಮೂಲಕ ಮುನಿಗಳು ಜೈನ ಮಂದಿರ ತಲುಪಿದರು. ಈ ಕುರಿತು, ಶ್ವೇತಾಂಬರ ಸಂಘದ ತಾಲೂಕು ಅಧ್ಯಕ್ಷ ಕಾಂತಿಲಾಲ್ ಜೈನ್ ಪ್ರತಿಕ್ರಿಯಿಸಿ, ಜೈನ ಮುನಿಗಳು ನಾಲ್ಕು ದಿನ ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಲಿದ್ದು, ಮಂದಿರದಲ್ಲಿ ಪ್ರವಚನ ನೀಡಲಿದ್ದಾರೆ. ಫೆ.8ರಂದು ಸಂಜೆ 4 ಗಂಟೆಗೆ ಗುರುಗಳನ್ನು ಹೂವಿನಹಡಗಲಿಗೆ ಬೀಳ್ಕೊಡಲಾಗುವುದು. ಪಟ್ಟಣದಲ್ಲಿ ಫೆ.7ರಂದು ನಡೆಯಲಿರುವ ಹಿಂದೂ ಸಮಾವೇಶದಲ್ಲಿ ಸಮಿತಿ ಮನವಿ ಮೇರೆಗೆ ಗುರುಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.
ಶ್ವೇತಾಂಬರ ಸಂಘದ ಕಾರ್ಯದರ್ಶಿ ನರಪತ್ ಮೆಹ್ತಾ, ಸಂದೀಪ್ ಸಜ್ಜನ್, ಸಿ.ಎಂ.ಕಾಂತಿಲಾಲ್, ಚಂದನ್‌ಮಲ್ ಜೈನ್, ಮಹೇಂದ್ರ ಕುಮಾರ್, ಮುಖೇಶ್ ಕುಮಾರ್, ದಿನೇಶ ದಾರಿವಾಲ್, ವರ್ತಕರ ಸಂಘದ ತಾಲೂಕು ಅಧ್ಯಕ್ಷ ಬದಾಮಿ ಮೃತ್ಯುಂಜಯ, ಗೌತಮ್ ದಾರಿವಾಲ್, ಅಂಬಲಾಲ್ ಜೈನ್, ಪ್ರವೀಣ್, ಮದನ್‌ಲಾಲ್, ವಿಕಾಸ್ ಬಾಪ್ನಾ, ಬೆರುಲಾಲ್, ಮಹಿಳಾ ಸಂಘದ ಅಧ್ಯಕ್ಷೆ ಡಿಂಪಲ್ ದಾರಿವಾಲ್, ಪದ್ಮಾ ಮೆಹ್ತಾ, ತಾರಾಬೆಹನ್, ಪಿಂಕಿ ಕಾಂಕಣಿಯಾ, ಪಿಂಕಿ ಛೋಪ್ರಾ ಇತರರಿದ್ದರು.