ಎಮ್ಮಿಗನೂರು ಹಂಪಿ ಸಾವಿರದೇವರಮಠದಲ್ಲಿ ವೈದ್ಯರನ್ನು ಗೌರವಿಸಲಾಯಿತು. ಪ್ರಮುಖರಾದ ಶ್ರೀ ವಾಮದೇವ ಶಿವಾಚಾರ್ಯರು, ಉಡೇದ್ ಬಸವರಾಜ, ಪ್ಯಾಟ್ಯಾಳ್ ಬಸವರಾಜ, ಬಜಾರ್ ಬಸವರಾಜ ಇತರರಿದ್ದರು.
ಕಂಪ್ಲಿ: ವೈದ್ಯರು ವೈಜ್ಞಾನಿಕ ಜ್ಞಾನವುಳ್ಳವರಾದರೂ ಧಾರ್ಮಿಕ ಮನೋಭಾವ ಹೊಂದಿದ್ದಲ್ಲಿ ವೃತ್ತಿಗೆ ಇನ್ನಷ್ಟು ಕಳೆ ಮೂಡಬಲ್ಲದು. ಪ್ರಾಣ ರಕ್ಷಿಸುವ ವೈದ್ಯರನ್ನು ಭಗವಾನ್ ನಾರಾಯಣಗೆ ಹೋಲಿಸಲಾಗುತ್ತದೆ. ಇವರಲ್ಲಿನ ದೈವ ಭಕ್ತಿ ಅವರನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಹಂಪಿ ಸಾವಿರದೇವರಮಠದ ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.
ಎಮ್ಮಿಗನೂರಿನ ಶ್ರೀ ಹಂಪಿ ಸಾವಿರದೇವರ ಮಠದಲ್ಲಿ ನಡೆದ ಶಿಶುನಾಳ ಶರೀಫರ ಪುರಾಣ ಪ್ರವಚನದಲ್ಲಿ ಗುರುವಾರ ಬಳ್ಳಾರಿ ವೈದ್ಯರುನ್ನು ಗೌರವಿಸಿ ಮಾತನಾಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ, ಹಿರಿಯ ನ್ಯಾಯವಾದಿ ಉಡೇದ ಬಸವರಾಜ್, ವೈದ್ಯರಾದ ಡಾ. ಮಂಜುನಾಥ್, ಸುಂದರೇಶ್, ಸೋಮನಾಥ್, ಸದಾಶಿವಗೌಡ, ಜೀವಿರಾವ್‌ರನ್ನು ಗೌರವಿಸಲಾಯಿತು. ನಾನಾ ಮಠಾಧೀಶರು, ವೀರಶೈವ ಸಮಾಜದ ಮುಖಂಡರಾದ ಪ್ಯಾಟ್ಯಾಳ್ ಬಸವರಾಜ, ಬಜಾರ್ ಬಸವರಾಜ, ಮಹೇಶ್ ಗೌಡ, ಸದಾಶಿವಗೌಡ ಇತರರಿದ್ದರು.